ಕಪ್ಪಾಗಿದ್ದಾಳೆಂದು ರೂಪದ ಬಗ್ಗೆ ಅವಮಾನ: ಗಂಡನ ಚುಚ್ಚು ಮಾತಿಗೆ ಮನನೊಂದು ಪತ್ನಿ ಸೂಸೈಡ್!

0
Spread the love

ಚಿಕ್ಕಬಳ್ಳಾಪುರ:- ಚಿಕ್ಕಬಳ್ಳಾಪುರದ ಚಿಂತಾಮಣಿಯ ನವವಿವಾಹಿತೆಯೊಬ್ಬರು ಮದುವೆಯಾಗಿ 7 ತಿಂಗಳಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

Advertisement

ಆಕೆಯ ಅತ್ತೆ, ಮಾವ, ಮೈದುನ, ಗಂಡ ವರದಕ್ಷಿಣೆಗಾಗಿ ತಮ್ಮ ಮಗಳನ್ನು ಪೀಡಿಸುತ್ತಿದ್ದರು ಎಂದು ಮೃತ ಮಹಿಳೆಯ ಪೋಷಕರು ಆರೋಪಿಸಿದ್ದಾರೆ.

ಬಿಂದುಶ್ರೀ ಎಂಬ 22 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ. ಆಕೆಯ ಗಂಡ ರಾಘವೇಂದ್ರ ಹೆಚ್.ಎಂ., ಮಾವ ಎನ್.ಮುನಿರಾಜ, ಅತ್ತೆ ಲತಾ ಹಾಗೂ ನರಸಿಂಹಯ್ಯ ವಿರುದ್ಧ ಪ್ರಕರಣ ದಾಖಲಾಗಿದೆ. ಬಿಂದುಶ್ರೀ ಅವರ ಗಂಡ ರಾಘವೇಂದ್ರ ಸರ್ಕಾರಿ ಸೌಮ್ಯದ ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಿಷ್ಟೇ ಅಲ್ಲದೆ, ಮಗಳ ಆತ್ಮಹತ್ಯೆಯಿಂದ ಆಘಾತಗೊಂಡ ಮೃತ ಮಹಿಳೆಯ ತಂದೆ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಂದುಶ್ರೀ ಕಪ್ಪಗಿದ್ದಾರೆ ಎಂದು ಆಕೆಯನ್ನು ಅವಮಾನಿಸಿ ವರದಕ್ಷಿಣಿ ಕಿರುಕುಳ ನೀಡಿರುವ ಆರೋಪ ಆಕೆಯ ಗಂಡನ ಮನೆಯವರ ಮೇಲೆ ಕೇಳಿಬಂದಿದೆ. 20 ಲಕ್ಷ ರೂಪಾಯಿ ಹಣ ಕೊಡುವಂತೆ ಕಿರುಕುಳ ಆರೋಪ ಕೇಳಿಬಂದಿದೆ.

ಡಿಗ್ರಿ ಕೊನೆಯ ವರ್ಷದ ಪರೀಕ್ಷೆ ಬರೆಯಲು ಮಗಳ ನಮ್ಮ ಮನೆಗೆ ಬಂದಾಗ ವಾಪಾಸ್ ತಮ್ಮ ಮನೆಗೆ ಬರುವಾಗ 20 ಲಕ್ಷ ರೂ. ಹಣ ತರುವಂತೆ ಆಕೆಯ ಮಾವ ಹೇಳಿ ಕಳುಹಿಸಿದ್ದರು. ಆಕೆ ಮನೆಗೆ ಹೋದಾಗ ವರದಕ್ಷಿಣೆ ತರಲಿಲ್ಲವೆಂದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದು ಬಿಂದುಶ್ರೀ ತವರು ಮನೆಯವರು ದೂರು ನೀಡಿದ್ದಾರೆ.

ಬಿಂದುಶ್ರೀಯ ಗಂಡ ರಾಘವೇಂದ್ರಗೆ ಮದುವೆ ಸಂದರ್ಭದಲ್ಲಿ 60 ಗ್ರಾಂ ಚಿನ್ನಾಭರಣಗಳನ್ನು ನೀಡಲಾಗಿತ್ತು. 60 ಗ್ರಾಂ ಬದಲು 100 ಗ್ರಾಂ. ಚಿನ್ನಾಭರಣ ಕೊಡಬೇಕಿತ್ತೆಂದು ಪದೇಪದೇ ಗಲಾಟೆ ಮಾಡುತ್ತಿದ್ದ. ಚಿಂತಾಮಣಿಯಿಂದ ಹೊಸಕೋಟೆ ತಾಲ್ಲೂಕಿನ ಹಿರಂಡಹಳ್ಳಿ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಂತಾಮಣಿ ನಗರ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here