ನಾಚಿಕೆಗೇಡಿನ ಘಟನೆ.. ತಾಯಿಯ ಮೇಲೆ ಮಗನಿಂದಲೇ ಅತ್ಯಾಚಾರ!

0
Spread the love

ಚಿಕ್ಕಬಳ್ಳಾಪುರ: ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿ ನಡೆದಿದೆ. ಹೌದು ಹೆತ್ತ ತಾಯಿಯ ಮೇಲೆಯೇ ಮಗ ಅತ್ಯಾಚಾರ ಮಾಡಿ ಹತ್ಯೆಗೆ ಯತ್ನಸಿದ್ದಾನೆ.

Advertisement

ಅಶೋಕ್‌ ಎಂಬಾತ ಅತ್ಯಾಚಾರ ಮಾಡಿ ತಾಯಿಯ ಕೊಲೆಗೆ ಯತ್ನಿಸಿದ ಪಾಪಿ ಮಗ. ಕುಡಿದ ಅಮಲಿನಲ್ಲಿ ಪಾತಕಿ ಅಶೋಕ್‌ ಈ ಕೃತ್ಯ ಎಸಗಿದ್ದಾನೆ.

ನಿನ್ನೆ ರಾತ್ರಿ ಕುಡಿದ ಅಮಲಿನಲ್ಲಿ ಹೆತ್ತ ತಾಯಿಯನ್ನು ವಿವಸ್ತ್ರಗೊಳಿಸಿ ತಿಪ್ಪೆಯಲ್ಲಿ ಎಳೆದೊಯ್ದು ಕೃತ್ಯ ಎಸಗಿದ್ದಾನೆ.

ಟಿಪ್ಪರ್ ಲಾರಿ ಡ್ರೈವರ್ ಕೆಲಸ ಮಾಡಿಕೊಂಡಿದ್ದ ಅಶೋಕ, ಆಗಾಗ ಬಂದು ಜಗಳವಾಡುತ್ತಿದ್ದ. ಅಶೋಕನಿಗೆ ಮದುವೆಯಾಗಿದ್ದು, ಈತನ ವಿಕೃತಿ ಹಾಗೂ ಕಿರುಕುಳ ತಾಳಲಾರದೆ ಪತ್ನಿ ಮನೆ ಬಿಟ್ಟು ಹೋಗಿದ್ದರು. ತಾಯಿ ಅರವತ್ತು ವರ್ಷದವರಾಗಿದ್ದು, ಮಗನಿಂದ ಅತ್ಯಾಚಾರಕ್ಕೊಳಗಾಗಿ ಗಾಯಗೊಂಡು ಸದ್ಯ ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೃತ್ಯದ ನಂತರ ತಾಯಿಯನ್ನು ತಿಪ್ಪೆಯಲ್ಲಿಯೇ ಬಿಟ್ಟು ಮಗ ಪರಾರಿಯಾಗಿದ್ದಾನೆ. ತಂದೆ ಹಾಗೂ ಸಹೋದರ ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ಕರೆತಂದಿದ್ದಾರೆ.

ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.


Spread the love

LEAVE A REPLY

Please enter your comment!
Please enter your name here