HomeGadag Newsಅಂದಯ್ಯ ಅರವಟಗಿಮಠ ಅವರಿಗೆ ಪ್ರಥಮ ಬಹುಮಾನ

ಅಂದಯ್ಯ ಅರವಟಗಿಮಠ ಅವರಿಗೆ ಪ್ರಥಮ ಬಹುಮಾನ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ : ಸಮೀಪದ ಡ.ಸ. ಹಡಗಲಿ ಗ್ರಾಮದ ಅಂದಯ್ಯ ಅರವಟಗಿಮಠ ಅವರು ಗದಗ ನಗರದ ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿದ್ದು, ಅವರು ಬರೆದ `ದೈವ ದೈವಗಳಾಚೆ’ ಕಥೆಗೆ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡವು ಈಚೆಗೆ ಏರ್ಪಡಿಸಿದ್ದ ನಾಡೋಜ ಡಾ. ಚೆನ್ನವೀರ ಕಣವಿ ಮತ್ತು ಶ್ರೀಮತಿ ಶಾಂತಾದೇವಿ ಕಣವಿ ದತ್ತಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಲಭಿಸಿದೆ.

ಕನ್ನಡದ ಹೆಸರಾಂತ ಕಥೆಗಾರರರು ನಿರ್ಣಯಿಸಿದ ಬಹುಮಾನವನ್ನು ಹಿರಿಯ ಬರಹಗಾರರಾದ ಡಾ. ಲೋಹಿತ್ ಡಿ.ನಾಯ್ಕರ್ ಮತ್ತು ವಿಮರ್ಶಕರಾದ ಎಸ್.ಆರ್. ವಿಜಯಶಂಕರ ಅವರು ಜೂನ್ 28ರ ಸಂಜೆ 6ಕ್ಕೆ ಧಾರವಾಡದ ಕರ್ನಾಟಕದ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ವಿತರಿಸಲಿದ್ದಾರೆ. ಈ ಸಂದರ್ಭದಲ್ಲಿ ನಿರ್ಣಾಯಕರ ನುಡಿಗಳನ್ನು ಶ್ರೀಧರ ಗಸ್ತಿ ನುಡಿಯಲಿದ್ದು, ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಿವಾನಂದ ಕಣವಿ, ಕರುಣ ಪ್ರಸಾದ ಕಣವಿ, ರಂಜನಾ, ಡಾ. ಅಶೋಕ ಗೋದಿ ಉಪಸ್ಥಿತರಿರುತ್ತಾರೆ.

ಅಭಿನಂದನೆ-ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಅಂದಯ್ಯ ಅರವಟಗಿಮಠ ಅವರನ್ನು ಗದಗನ ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷರಾದ ರಜನಿ ಪಾಟೀಲ್, ಪ್ರಾಚಾರ್ಯ ಡಾ. ಎ.ಕೆ. ಮಠ, ಉಪ ಪ್ರಾಚಾರ್ಯೆ ಡಾ. ವೀಣಾ ಮತ್ತು ಮಹಾವಿದ್ಯಾಲಯದ ಸಮಸ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ ವೃಂದ, ನರೇಗಲ್ಲ ಬೀಚಿ ಬಳಗದ ಅಧ್ಯಕ್ಷರಾದ ಕೆ.ಎಸ್. ಕಳಕಣ್ಣವರ ಮತ್ತು ಸದಸ್ಯರು, ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಡಿ.ಎ. ಅರವಟಗಿಮಠ ಮತ್ತು ಸದಸ್ಯರು ಬಹುಮಾನಿತರನ್ನು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!