ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ಕರ್ನಾಟಕ ಸರ್ಕಾರದಿಂದ ಕನ್ನಡ ಜಾಗೃತಿ ಸಮಿತಿ, ಜಿಲ್ಲಾ ಮಟ್ಟದ ಸಮಿತಿಗಳನ್ನು ಆಯ್ಕೆ ಮಾಡಲಾಗಿದ್ದು, ಗದಗ ಜಿಲ್ಲಾ ಮಟ್ಟದ ಸಮಿತಿಗೆ ಕನ್ನಡ ಸಾಹಿತ್ಯದ ಕಾಳಜಿಯುಳ್ಳವರು, ಶರಣತತ್ವ ಪ್ರತಿಪಾದಕರು, ಚಿಂತಕರು, ಅನುಭಾವಿಗಳಾದ ಶರಣ ಅಶೋಕ ಬಿ.ಬರಗುಂಡಿ ಇವರು ಆಯ್ಕೆಯಾಗಿದ್ದಾರೆ.
Advertisement
ಇವರ ಅಧಿಕಾರಾವಧಿಯಲ್ಲಿ ಗದಗ ಜಿಲ್ಲಾ ಮಟ್ಟದ ಕನ್ನಡ ಜಾಗೃತಿ, ಅಭಿವೃದ್ಧಿ ಮತ್ತು ಕನ್ನಡ ಉಳಿವಿಗಾಗಿ ಶ್ರಮವಹಿಸಲಿ ಎಂದು ಬಸವದಳ-ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ, ಶರಣ ಸಾಹಿತ್ಯ ಪರಿಷತ್ತು, ಗದಗ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ಬಸವಪರ ಸಂಘಟನೆಗಳ ಪದಾಧಿಕಾರಿಗಳು ಆಶಿಸಿದ್ದಾರೆ.


