ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡ ನಾಡಿನ ಶರಣರು ಸಾಮಾಜಿಕ-ಧಾರ್ಮಿಕ ವಿಚಾರಗಳನ್ನು ಮುನ್ನೆಲೆಗೆ ತಂದು ವೈಯಕ್ತಿಕ ಉನ್ನತಿಯೊಂದಿಗೆ ಸಮಾಜೋನ್ನತಿಗೆ ಶ್ರಮಿಸಿದ್ದಾರೆ. 17ನೇ ಶತಮಾನದಲ್ಲಿ ಷಣ್ಮುಖ ಶಿವಯೋಗಿಗಳು ಭಕ್ತಿ, ಜ್ಞಾನ, ವೈರಾಗ್ಯದ ಮೂಲಕ ಸಮಾಜದಲ್ಲಿರುವ ಅಸಮಾನತೆಯನ್ನು ತೊಡೆದು ಹಾಕಿ ಜಾತಿ, ಮತ, ಪಂಥಗಳಲ್ಲಿ ಸಾಮರಸ್ಯವನ್ನು ಮೂಡಿಸಲು ಪ್ರಯತ್ನಿಸಿದರು ಎಂದು ಪಿ.ಪಿ.ಜಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರಾಜಶೇಖರ ದಾನರಡ್ಡಿ ತಿಳಿಸಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಸಂಶೋಧನಾ ಕೃತಿಗಳ ಪರಿಚಯ ಮಾಲಿಕೆಯಲ್ಲಿ ತಮ್ಮ ಸಂಶೋಧನಾ ಗ್ರಂಥದ ಕುರಿತು ಉಪನ್ಯಾಸ ನೀಡಿದರು.
ಬಸವಾದಿ ಶರಣರ ಪರಂಪರೆಯನ್ನು ಮುಂದುವರೆಸಿಕೊಂಡು ಬಂದು ಸುಮಾರು ಎಂಟುನೂರು ವಚನಗಳನ್ನು ರಚಿಸಿದ್ದಾರೆ. ಅವರ ವಚನಗಳಲ್ಲಿ ತತ್ವ, ಯೋಗ, ಮತ್ತು ಭಕ್ತಿಯ ಅಗಾಧತೆಯನ್ನು ಕಾಣಬಹುದಾಗಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಡಾ. ಬಿ.ಬಿ. ಹೊಳಗುಂದಿ ಮಾತನಾಡಿ, ಜಾಗತಿಕ ಇತಿಹಾಸದಲ್ಲಿ ಕನ್ನಡ ನಾಡಿನ ಕೊಡುಗೆ ಅಪಾರವಾಗಿದೆ. ಶರಣರು ಸಮಸಮಾಜ ನಿರ್ಮಾಣದ ಕನಸನ್ನು ಹೊಂದಿ ಮೂಢನಂಬಿಕೆಗಳನ್ನು ತೊಡೆದು ಹಾಕಲು ಪ್ರಯತ್ನಿಸಿದರು. ಸಾರ್ವಕಾಲಿಕವಾಗಿರುವ ಅವರ ಚಿಂತನೆಗಳನ್ನು ನಾವಿಂದು ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿರುವ ಹಿನ್ನೆಲೆಗಾಗಿ ಜೆ.ಪಿ. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ.ಬಿ. ಹೊಳಗುಂದಿ ಅವರನ್ನು ಸನ್ಮಾನಿಸಲಾಯಿತು.
ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ರಾಹುಲ್ ಗಿಡ್ನಂದಿ ನಿರೂಪಿಸಿದರು. ಶಶಿಕಾಂತ ಕೊರ್ಲಹಳ್ಳಿ ವಂದಿಸಿದರು. ಈರನಗೌಡ ಮಣಕವಾಡ ಅವರು ವಚನಗಳನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ ವಸ್ತ್ರದ, ರತ್ನಕ್ಕ ಪಾಟೀಲ, ಸಿ.ಕೆ.ಎಚ್. ಕಡಣಿಶಾಸ್ತ್ರಿ, ಡಾ. ಜಿ.ಬಿ. ಪಾಟೀಲ, ಸೈಯದ್ ಉಸ್ಮಾನ ಕೊಪ್ಪಳ, ಶಿವಾಜಿ ಕಾಂಬಳೇಕರ, ಸಿದ್ಧಲಿಂಗೇಶ ಸಜ್ಜನಶೆಟ್ಟರ, ಮಲ್ಲಪ್ಪ ಡೋಣಿ, ನಾಗಪ್ಪ ಸುರಳಿಕೇರಿ, ಶೈಲಜಾ ಗಿಡ್ನಂದಿ, ರತ್ನಾ ಪುರಂತರ, ರಶ್ಮಿ ಅಂಗಡಿ, ಅಂದಾನಯ್ಯ ಹಿರೇಮಠ, ಜಯದೇವ ಮೆಣಸಗಿ, ಕುಬೇರಪ್ಪ ಗದಗ, ಕೆ.ಎಸ್. ಗುಗ್ಗರಿ, ಸಿ.ಎಂ. ಮಾರನಬಸರಿ, ರಾಜಶೇಖರ ಕರಡಿ, ಕೆ.ಎಸ್. ಬಾಳಿಕಾಯಿ, ಎಸ್.ಎಸ್. ಪತ್ತಾರ, ಪಿ.ವಿ. ಇನಾಮದಾರ, ಚನವೀರಪ್ಪ ದುಂದೂರ, ಗಂಗಪ್ಪ ಮುದಗಲ್, ಬಿ.ಎಸ್. ಹಿಂಡಿ, ಅನ್ನದಾನಿ ಹಿರೇಮಠ, ದೇವೇಂದ್ರ ನಾಯಕ, ಪೃಥ್ವಿರಾಜ ಚವ್ಹಾಣ, ಎಸ್.ಎಲ್. ಕುಲಕರ್ಣಿ, ಕೆ.ಜಿ. ವ್ಯಾಪಾರಿ, ಅಶೋಕ ಸತ್ಯರೆಡ್ಡಿ, ಬಸವರಾಜ ತೋಟಗೇರ, ಎಂ.ಬಿ. ವಾಲ್ಮೀಕಿ, ಎಂ.ಆರ್. ನಾಯ್ಕ, ಶ್ರೀಕಾಂತ ಜಾಧವ, ಕೃಷ್ಣಾಜಿ ನಾಡಗೇರ, ಬಿ.ಎಲ್. ಚವ್ಹಾಣ, ಸತೀಶ ಚನ್ನಪ್ಪಗೌಡರ, ಡಿ.ಎಸ್. ಬಾಪುರಿ, ದತ್ತಪ್ರಸನ್ನ ಪಾಟೀಲ ಮೊದಲಾದವರು ಭಾಗವಹಿಸಿದ್ದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ತೀರಾ ವೈಯಕ್ತಿಕವೆನಿಸುವ ಆಧ್ಯಾತ್ಮಿಕ ವಿಚಾರಗಳನ್ನು ಬಹುಜನರಿಗೆ ತಿಳಿಸಿ, ಶೋಷಣಾಮುಕ್ತ ಸಮಾಜಕ್ಕೆ ಶಿವಯೋಗಿಗಳು ಪ್ರಯತ್ನಿಸಿದರು. ವಚನಗಳ ವಿಚಾರಗಳನ್ನು ಅಧ್ಯಯನ ಮಾಡಿ, ಅಳವಡಿಸಿಕೊಂಡು, ಆಚರಿಸಿದರೆ ಮತ್ತೆ ಕಲ್ಯಾಣ ರಾಜ್ಯ ನೆಲೆಗೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.