ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಹಿರೇಬಣದಲ್ಲಿರುವ ಶ್ರೀ ವೆಂಕಟೇಶ್ವರ ಭವ್ಯ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವ ಕಾರ್ಯಕ್ರಮಗಳು ಸೆ.22ರಿಂದ ಪ್ರಾರಂಭವಾಗಿದ್ದು, ಅಕ್ಟೋಬರ್ 2ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
11 ದಿನಗಳ ಕಾಲ ನಿತ್ಯ ಬೆಳಿಗ್ಗೆ 6ಕ್ಕೆ ಉದಯರಾಗ, ಬೆಳಿಗ್ಗೆ 7.30ಕ್ಕೆ ಅಷ್ಟೋತ್ತರ, ಬೆಳಗ್ಗೆ 8.30ಕ್ಕೆ ಪಂಚಾಮೃತಾಭಿಷೇಕ, ಸಂಜೆ 5ರಿಂದ 6ರವರೆಗೆ ಧರ್ಮದರ್ಶಿಗಳು ಹಾಗೂ ಪ್ರಧಾನ ಅರ್ಚಕರಾಗಿರುವ ವೆಂಕಟೇಶ ಗುಡಿ ಅವರಿಂದ ಶ್ರೀನಿವಾಸ ಕಲ್ಯಾಣ ಪುರಾಣ, ಸಂಜೆ 7.30 ವಾಹನೋತ್ಸವ, ಅಷ್ಟಾವಧಾನ, ಮಹಾಮಂಗಳಾರತಿ ನಡೆಯುತ್ತಿವೆ.
ಅ.2ರಂದು ಮಧ್ವಾಚಾರ್ಯರ ಜಯಂತಿ ಪ್ರಯುಕ್ತ ಬೆಳಿಗ್ಗೆ 7.30ಕ್ಕೆ ಮಧ್ವಾಚಾರ್ಯರ ಭಾವಚಿತ್ರ ಮೆರವಣಿಗೆ, ವಿಜಯದಶಮಿ ಪ್ರಯುಕ್ತ ಮುಂಜಾನೆ 10.30ಕ್ಕೆ ರಥೋತ್ಸವ, ಅಷ್ಟಾವಧಾನ, ಮಹಾಮಂಗಳಾರತಿ ಜರುಗಲಿದೆ. ಸಾಯಂಕಾಲ 5ಕ್ಕೆ ಸೀಮೋಲ್ಲಂಘನ (ಬನ್ನಿ ಮುಡಿಯುವ) ಕಾರ್ಯಕ್ರಮ ಜರುಗಲಿದ್ದು, ಸಾರ್ವಜನಿಕರು ಪಾಲ್ಗೊಳ್ಳುವಂತೆ ವೆಂಕಟೇಶ್ವರ ದೇವಸ್ಥಾನದ ಧರ್ಮದರ್ಶಿಗಳು ಹಾಗೂ ಪ್ರಧಾನ ಅರ್ಚಕ ವೆಂಕಟೇಶ ಗುಡಿ ಮನವಿ ಮಾಡಿದ್ದಾರೆ.



