ರಂಭಾಪುರಿ ಶ್ರೀಗಳಿಗೆ ಗೌರವ ಸಮರ್ಪಣೆ

0
Sharannavaratri Dasara Dharma Conference at Abbigeri
Spread the love

ವಿಜಯಸಾಕ್ಷಿ ಸುದ್ದಿ, ಗದಗ : ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ಅ. 3ರಿಂದ 12ರವರೆಗೆ ನಡೆಯಲಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನಕ್ಕೆ ಗದಗ ಮಾರ್ಗವಾಗಿ ಪ್ರಯಾಣಿಸಿದ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಜ.ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರನ್ನು ಗದುಗಿನ ಭಕ್ತಾಧಿಗಳು ಗೌರವ ಸಮರ್ಪಣೆಗೈದು ಭಕ್ತಿಯಿಂದ ಬೀಳ್ಕೊಟ್ಟರು.

Advertisement

ಬುಧವಾರ ನಗರದ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರದ ಆವರಣದಲ್ಲಿ ಏರ್ಪಡಿಸಿದ್ದ ಸರಳ ಔಪಚಾರಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಪೂಜ್ಯರು ಸರ್ವ ಭಕ್ತಾಧಿಗಳಿಗೆ ಆಶೀರ್ವದಿಸಿ, ಅಬ್ಬಿಗೇರಿಯಲ್ಲಿ ಜರುಗಲಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಸರ್ವ ಭಕ್ತಾಧಿಗಳು ಪಾಲ್ಗೊಳ್ಳುವಂತೆ ಕರೆ ನೀಡಿದರು.

ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರದ ಕಾರ್ಯದರ್ಶಿ ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಂಗಲ್ಯ ಮಂದಿರದ ಕಾರ್ಯಾಧ್ಯಕ್ಷ ಅಜ್ಜಣ್ಣ ಮಲ್ಲಾಡದ, ವೀರೇಶ ಕೂಗು, ರಮೇಶ ಶಿಗ್ಲಿ, ಮಲ್ಲಿಕಾರ್ಜುನ ಶಿಗ್ಲಿ, ಶಿವಾನಂದಯ್ಯ ಹಿರೇಮಠ, ರಾಜಣ್ಣ ಕುರಡಗಿ, ಸದಾಶಿವಯ್ಯ ಮದರಿಮಠ, ಲಿಂಗರಾಜ ಗುಡಿಮನಿ, ವಿನಾಯಕ ಪಾಟೀಲ, ಬಸವರಾಜ ಅಂಗಡಿ, ಶರಣಯ್ಯ ಜುಕ್ತಿಮಠ, ಸಿ.ಬಿ. ಪಲ್ಲೇದ, ಬಸಯ್ಯ ಸಾಸ್ವಿಹಳ್ಳಿಮಠ, ಬಸಯ್ಯ ಇಟಗಿಮಠ, ಸಂತೋಷ ನಾಯ್ಕರ್, ಶಾದಿಕ್ ಶೇಖ, ಮಾಬಳೇಶ್ವರ ಇಟಗಿಮಠ, ರಮೇಶ ಚವ್ಹಾಣ, ನಿಂಗನಗೌಡ್ರ ತಿಪ್ಪನಗೌಡ್ರ, ರಾಮಪ್ಪ ಅಣ್ಣಿಗೇರಿ, ಶ್ರೀಕಾಂತ ಹೂಗಾರ, ರೇವಪ್ಪ ಪೋಡಕೆ, ಮಹಾಂತಯ್ಯ ಇಟಗಿಮಠ, ಅಬ್ದುಲ್‌ಸಾಬ ದೊಡ್ಡಮನಿ, ಪ್ರಕಾಶ ಬೇಲಿ, ರಾಜಣ್ಣ ಮಲ್ಲಾಡ, ಶಿವಲಿಂಗ ಶಾಸ್ತಿç ಸಿದ್ದಾಪೂರ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here