HomeKarnataka Newsಶಿಗ್ಗಾವಿ ಉಪಚುನಾವಣೆ: ‌ಕಾಂಗ್ರೆಸ್‌ ಅಭ್ಯರ್ಥಿಯಾಗಿ ಯಾಸಿರ್ ಅಹ್ಮದ್ ಖಾನ್ ಪಠಾಣ್‌ ನಾಮಪತ್ರ ಸಲ್ಲಿಕೆ!

ಶಿಗ್ಗಾವಿ ಉಪಚುನಾವಣೆ: ‌ಕಾಂಗ್ರೆಸ್‌ ಅಭ್ಯರ್ಥಿಯಾಗಿ ಯಾಸಿರ್ ಅಹ್ಮದ್ ಖಾನ್ ಪಠಾಣ್‌ ನಾಮಪತ್ರ ಸಲ್ಲಿಕೆ!

For Dai;y Updates Join Our whatsapp Group

Spread the love

ಹಾವೇರಿ: ಶಿಗ್ಗಾವಿ-ಸವಣೂರು ಬೈ ಎಲೆಕ್ಷನ್ ಚುನಾವಣಾ ಅಖಾಡ ರಂಗೇರಿದೆ. ಶಿಗ್ಗಾವಿ‌ ಕಾಂಗ್ರೆಸ್ ಟಿಕೆಟ್ ಗೊಂದಲಕ್ಕೆ ತೆರೆ ಬಿದ್ದಿದ್ದು, ಯಾಸಿರ್‌ ಖಾನ್ ಪಠಾಣ್‌ಗೆ ಮತ್ತೊಮ್ಮೆ ಟಿಕೆಟ್ ನೀಡಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನುಮತಿ ಮೇರೆಗೆ ಪಠಾಣ್‌ಗೆ ಟಿಕೆಟ್ ಘೋಷಿಸಲಾಗಿದೆ. ಇನ್ನೂ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು,

ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಅಹಮದ್ ಖಾನ್ ಪಠಾಣ್ ನಾಮಪತ್ರ ಸಲ್ಲಿಸಿದ್ದಾರೆ. ತನ್ನ ಆಪ್ತರೊಂದಿಗೆ ಬಂದು ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದು, ಮಾಜಿ ಸಿಎಂ ಪುತ್ರ ಭರತ್ ಬೊಮ್ಮಾಯಿ ವಿರುದ್ಧ ಅಖಾಡಕ್ಕೆ ಇಳಿದಿದ್ದಾರೆ.

ನಾಮಪತ್ರ ಸಲ್ಲಿಸಿದ ಬಳಿಕ ಮಾದ್ಯಮವರೊಂದಿಗೆ ಮಾತನಾಡಿದ ಅವರು, ನಾವು ಎಲ್ಲರೂ ಈ ಮೊದಲೇ ಜನತಾ ನ್ಯಾಯಾಲಯದಲ್ಲಿ ಪ್ರಮಾಣ ಮಾಡಿದ್ದೇವೆ. ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಾಪ್ರಾಯ ಇಲ್ಲ, ಯಾರಿಗೇ ಟಿಕೆಟ್ ಸಿಕ್ಕರೂ ಒಗ್ಗಟ್ಟಾಗಿ ಕೆಲಸ ಮಾಡುವುದಾಗಿದೆ ಹೇಳಿದ್ದೇ ಎಂದು ಹೇಳಿದರು.

ಕಳೆದ ನಾಲ್ಕು ತಿಂಗಳಿಂದ ನಿರಂತರ ಕ್ಷೇತ್ರ ಸುತ್ತಾಡಿದ್ದೇನೆ. ಹಾವೇರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸಾಮಾಜಿಕ. ನ್ಯಾಯದ ಅಡಿಯಲ್ಲಿ ಅಲ್ಪ ಸಂಖ್ಯಾತರ ಸಮಾಜಕ್ಕೆ ಟಿಕೆಟ್ ನೀಡಲಾಗಿದೆ ಎಂದರು.

ಇನ್ನೂ ಯಾಸಿರ್‌ ಖಾನ್ ಪಠಾಣ್‌ ರೌಡಿಶೀಟರ್ ಎನ್ನುವ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯವಾಗಿ ಹಿಂದೆ ಒಂದೆರಡು ಪ್ರಕರಣ ಇತ್ತು ಅಷ್ಟೆ, ನನ್ನ ಮೇಲೆ ಯಾವುದೇ ಪ್ರಕರಣಗಳಿಲ್ಲ. ಅದಲ್ಲದೆ ಅಜ್ಜಂಪೀರ್ ಖಾದ್ರಿ ಅವರು ನನ್ನ ಹಿರಿಯ ಸಹೋದರರು. ಖಾದ್ರಿ ಅವರು ಏನೇ ಹೇಳಿದ್ರು ಅದು ನನಗೆ ಆಶೀರ್ವಾದ ಎಂದು ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!