ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಹಲವರು ನಾಪತ್ತೆಯಾಗಿದ್ದು, ಈವರೆಗೆ ಒಟ್ಟು 8 ಜನರ ಮೃತದೇಹಗಳು ಪತ್ತೆಯಾಗಿವೆ. ಇನ್ನು ಹಲವರ ಮೃತದೇಹಗಳು ಪತ್ತೆಯಾಗಿಲ್ಲ. ಕಳೆದ 15 ದಿನಗಳಿಂದಲೂ ವಿವಿಧ ರಕ್ಷಣಾ ತಂಡಗಳು ಕಾರ್ಯಚರಣೆ ನಡೆಸಿದರೂ ಸಹ ಕೇರಳದ ಅರ್ಜುನ್ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜಗನ್ನಾಥ್, ಹಾಗೂ ಲೊಕೇಶ್ ಸುಳಿವು ಸಿಕ್ಕಿಲ್ಲ.
ಇನ್ನೂ ಮುಳುಗು ತಜ್ಞ ಈಶ್ವರ್ ಮಲ್ಪೆ ಶಿರೂರು ಗುಡ್ಡ ಕುಸಿತ ಪ್ರಕರಣದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದರು. ಅಮವಾಸ್ಯೆ ಸಂದರ್ಭದಲ್ಲಿ ನೀರಿನ ಸೆಳೆತ ಕಡಿಮೆ ಇರುತ್ತದೆ. ಮಳೆಯಾಗದೇ ಇದ್ದರೆ ಅಂದು ಕಾರ್ಯಾಚರಣೆ ಮಾಡುತ್ತೇನೆ. ಕೇರಳದಿಂದ ಬೋಟ್ ಒಂದು ಬರುತ್ತದೆ. ಬೋಟ್ ಬಂದು ಮಣ್ಣು ತೆರವು ಮಾಡಿದರೆ ಕಾರ್ಯಾಚರಣೆ ಮಾಡಬಹುದು ಎಂದರು.



