ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಯಶಸ್ವಿಯಾಗಿ ಸಾಗುತ್ತಿದ್ದು ಇನ್ನೇನು ಕೊನೆ ಹಂತಕ್ಕೆ ಬಂದಿದೆ. ಹನುಮಂತು ಅವರು ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಟ್ಟಿದ್ದು ಗೌತಮಿ, ಭವ್ಯ, ಧನರಾಜ್, ರಜತ್ ಕಿಶನ್, ಮೋಕ್ಷಿತಾ, ಮಂಜು ಹಾಗೂ ತ್ರಿವಿಕ್ರಮ್ ಈ 7 ಸ್ಪರ್ಧಿಗಳಲ್ಲಿ ಒಬ್ಬರು ಈ ವಾರ ಎಲಿಮಿನೇಟ್ ಆಗಿ ಹೊರ ಬರುವುದು ಖಚಿತವಾಗಿದೆ.
ಇದರ ಮಧ್ಯೆ ಬಿಗ್ ಬಾಸ್ ಮನೆಗೆ ಈಗಾಗಲೇ ಎಲಿಮಿನೇಟ್ ಆಗಿರುವ ಸ್ಪರ್ಧಿಗಳು ಮತ್ತೆ ಮನೆಗೆ ಅತಿಥಿಗಳಾಗಿ ಆಗಮಿಸಿದ್ದಾರೆ. ಇದರಿಂದ ಸಖತ್ ಖುಷಿ ಪಟ್ಟಿರುವ ಹಾಲಿ ಸ್ಪರ್ಧಿಗಳು ಒಬ್ಬರನ್ನ ಒಬ್ಬರು ಎತ್ತಿಕೊಂಡು, ತಬ್ಬಿಕೊಂಡು ಸಖತ್ ಖುಷಿ ಪಟ್ಟಿದ್ದಾರೆ. ಮನೆಯಲ್ಲಿ ಆಗಿರುವ ಎಲಿಮಿನೇಶನ್ ಕುರಿತು ಮೆಲುಕು ಹಾಕಿದ್ದಾರೆ.
ಶಿಶಿರ್, ರಂಜಿತ್, ಗೋಲ್ಡ್ ಸುರೇಶ್, ಅನುಷಾ ರೈ, ಹಂಸ, ಯಮುನಾ, ಮಾನಸ ಅತಿಥಿಗಳಾಗಿ ಮನೆಗೆ ವಾಪಸ್ ಆಗಿದ್ದಾರೆ. ಕೂಡಿಟ್ಟ ನೆನಪುಗಳು, ಸಿಹಿ ಕಹಿ ಅನುಭವಗಳು, ಕೆಟ್ಟ ಘಟನೆಗಳು ಸಾಕಷ್ಟು ಇವೆ. ಸದ್ಯ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು ತಾವೆಲ್ಲಾ ಹೇಗೆಲ್ಲಾ ಆಡಿ, ಮನೆಯಿಂದ ಹೋಗಲು ಯಾರು ಕಾರಣ ಎಂದು ನೆನಪು ಮಾಡಿಕೊಂಡಿದ್ದಾರೆ.