ಬೆಳಗಾವಿ:- ಶಿವಸೇನೆ ಗೂಂಡಾಗಿರಿ ಮುಂದುವರಿದಿದ್ದು, ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ಸುಗಳಿಗೆ ಮಸಿ ಬಳಿದಿದ್ದಾರೆ.
ಪುಣೆಯ ಸ್ವಾರಗೇಟ್ ಬಳಿ ಪುಂಡಾಟಿಕೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಫೆ.22 ರಂದು ರಾತ್ರಿ ಶಿವಸೇನೆ ಕಾರ್ಯಕರ್ತರು ಕರ್ನಾಟಕದ ಬಸ್‌ಗಳಿಗೆ ಮಸಿ ಬಳಿದು ಗೂಂಡಾ ವರ್ತನೆ ತೋರಿದ್ದಾರೆ. ನಡು ರಸ್ತೆಯಲ್ಲಿಯೇ ಬಲವಂತವಾಗಿ ಬಸ್ ನಿಲ್ಲಿಸಿ ಮಸಿ ಬಳಿದಿದ್ದಾರೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಘಟಕಕ್ಕೆ ಸೇರಿದ ಬಸ್‌ಗಳಿಗೆ ಮಸಿ ಬಳಿಯಲಾಗಿದೆ. ಬಸ್ ಮೇಲಿದ್ದ ಕನ್ನಡ ಅಕ್ಷರಗಳಿಗೆ ಮಸಿ ಬಳಿಯಲಾಗಿದೆ. ಮುಂಬೈ ಇಳಕಲ್ ಮರಾಠಿ ಬರುತ್ತಾ ಎಂದು ಕೇಳಿ ಬರಲ್ಲ ಎಂದಿದ್ದಕ್ಕೆ ಬಸ್ ಬೋರ್ಡ್ ಒಡೆದು ಧಮ್ಕಿ ಹಾಕಿದ್ದಾರೆ.
ಕರ್ನಾಟಕದಲ್ಲಿ ಮರಾಠಿಗರಿಗೆ ತೊಂದರೆ ಕೊಟ್ಟರೆ ಹೀಗೆ ಒಡೆದು ಹಾಕ್ತಿವಿ ಎಂದು ಧಮ್ಕಿ ಕೊಟ್ಟಿದ್ದಾರೆ. ಠಾಕ್ರೆ ಬಣದ ಆಟಾಟೋಪಕ್ಕೆ ಮಹಾರಾಷ್ಟ್ರದಲ್ಲಿ ಬ್ರೇಕ್ ಇಲ್ಲದಂತಾಗಿದೆ. ಸಧ್ಯ ಮಹಾರಾಷ್ಟ್ರದಲ್ಲಿ ಠಾಕ್ರೆ ಬಣದ ಗೂಂಡಾವರ್ತನೆ ಮಿತಿಮೀರಿದೆ.