`ಪ್ರತಿಯೊಬ್ಬ ವ್ಯಕ್ತಿಯು ಶಿಕ್ಷಣವನ್ನು ಪಡೆಯಬೇಕು, ಏಕೆಂದರೆ ಯುದ್ಧದ ಸಮಯದಲ್ಲಿ ಶಕ್ತಿಯಿಂದ ಸಾಧಿಸಲಾಗದ ಜಯವನ್ನು, ಜ್ಞಾನ ಮತ್ತು ತಂತ್ರಗಳಿಂದ ಸಾಧಿಸಬಹುದು ಮತ್ತು ಜ್ಞಾನವು ಶಿಕ್ಷಣದಿಂದ ಬರುತ್ತದೆ’ ಎಂದವರು ಛತ್ರಪತಿ ಶಿವಾಜಿ ಮಹಾರಾಜರು.
ಛತ್ರಪತಿ ಶಿವಾಜಿ ಮಹಾರಾಜರು ಭಾರತದ ಮಹಾನ್ ಯೋಧ ಮತ್ತು ತಂತ್ರಜ್ಞರಾಗಿದ್ದರು. ಇವರು ಅತ್ಯಂತ ಧೈರ್ಯಶಾಲಿ ಸಾಮ್ರಾಟನಾಗಿದ್ದು, ಭಾರತದಾದ್ಯಂತ ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿ, ವಿಸ್ತರಿಸಿದ ಕೀರ್ತಿ ಇವರದ್ದು. ಶಿವಾಜಿ ಅವರು ತಮ್ಮ ಜೀವಿತಾವಧಿಯಲ್ಲಿ ತನ್ನ ಸಾಮ್ರಾಜ್ಯವನ್ನು ಮೊಘಲರಿಂದ ಕಾಪಾಡಿಕೊಳ್ಳಲು ಅನೇಕ ವರ್ಷಗಳ ಕಾಲ ಹೋರಾಡಿದ್ದರು. ಇನ್ನು ಕೆಲವರು ಛತ್ರಪತಿ ಶಿವಾಜಿಯನ್ನು ದೇವರೆಂದೇ ಪರಿಗಣಿಸುತ್ತಾರೆ. ದಕ್ಷಿಣ ಭಾರತದಲ್ಲಿ ಇಂದಿಗೂ ಕೂಡ ಪ್ರಾಚೀನ ಹಿಂದೂ ದೇವಾಲಯಗಳು ಉಳಿದಿದೆಯೆಂದರೆ ಅದಕ್ಕೆ ಮುಖ್ಯ ಕಾರಣ ಛತ್ರಪತಿ ಶಿವಾಜಿಯ ನ್ಯಾಯಯುತ ಆಡಳಿತವೇ ಆಗಿದೆ.
ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತದ್ದು. ಅಪ್ರತಿಮ ಯೋಧರೆನ್ನಿಸಿಕೊಂಡು ಹದಿಹರೆಯದಲ್ಲಿಯೇ ಯುದ್ಧಭೂಮಿಯಲ್ಲಿ ಪರಾಕ್ರಮ ಪ್ರದರ್ಶಿಸಿ ಮರಾಠ ರಾಜ್ಯ ಸ್ಥಾಪಿಸಿದ ಶಿವಾಜಿ ಮಹಾರಾಜ ಸ್ವಾಭಿಮಾನಿ ರಾಷ್ಟç ನಿರ್ವಾಣದ ಕನಸು ಕಂಡವರು.
ಛತ್ರಪತಿ ಶಿವಾಜಿ ಮಹಾರಾಜ ಅಥವಾ ಶಿವಾಜಿರಾಜೆ ಶಹಾಜಿರಾಜೆ ಭೋಂಸ್ಲೆ, ಫೆಬ್ರುವರಿ ೧೯,೧೬೩೦ರಂದು ಮಹಾರಾಷ್ಟದ ಪುಣೆಯ ಸಮೀಪದ ಶಿವನೇರಿ ಎಂಬಲ್ಲಿ ಜನಿಸಿದರು. ೧೬೭೪ರಲ್ಲಿ, ಅವರು ಪಶ್ಚಿಮ ಭಾರತದಲ್ಲಿ ಮರಾಠ ಸಾಮ್ರಾಜ್ಯದ ಅಡಿಪಾಯವನ್ನು ಹಾಕಿದರು. ಅವರನ್ನು ಭಾರತೀಯ ನೌಕಾಪಡೆಯ ಪಿತಾಮಹ ಎಂದೂ ಕರೆಯುತ್ತಾರೆ. ಛತ್ರಪತಿ ಶಿವಾಜಿ ಸ್ಥಾಪಿಸಿದ ಮರಾಠಾ ರಾಜ್ಯವು ೧೮೧೮ರವರೆಗೂ ರಾರಾಜಿಸಿತು.
ಶಿವಾಜಿಗೆ ಪೂರ್ಣಪ್ರಮಾಣದ ಯುದ್ಧ ಕೌಶಲವನ್ನು ಧಾರೆ ಎರೆದವರು ದಾದಾಜಿ ಕೊಂಡದೇವ. ಕತ್ತಿವರಸೆ, ಕುದುರೆ ಸವಾರಿ, ಯುದ್ಧಕಲೆಗಳನ್ನು ಕರಗತ ಮಾಡಿಕೊಂಡ ಶಿವಾಜಿ ೧೭ನೇ ವಯಸ್ಸಿಗೆ ತೋರಣದುರ್ಗ ವಶಪಡಿಸಿಕೊಂಡು ಮಹತ್ವಾಕಾಂಕ್ಷೆಯ ಹೆಜ್ಜೆಗಳನ್ನು ಇಡಲು ಆರಂಭಿಸಿದ್ದರು. ಎಳೆಯ ವಯಸ್ಸಿನಿಂದಲೇ ತಾಯಿ ಜೀಜಾಬಾಯಿಯಿಂದ ಜೀವನ ಮೌಲ್ಯಗಳ ಶಿಕ್ಷಣ ಪಡೆದಿದ್ದ ಶಿವಾಜಿ ಸಂತ ರಾಮದಾಸರ ಪರಮಭಕ್ತರಾಗಿದ್ದರು.
ಶಿವಾಜಿ ಮಹಾರಾಜರು ಕರುಣಾಮಯಿ ಮತ್ತು ತನ್ನ ಸೈನ್ಯದಲ್ಲಿ ಶರಣಾಗುವ ಯಾರನ್ನಾದರೂ ಸ್ವಾಗತಿಸಿದರು. ಯಾರನ್ನೂ ಅವರ ಹಿನ್ನೆಲೆಯ ಮೇಲೆ ನಿರ್ಣಯಿಸಲಾಗಿಲ್ಲ, ಬದಲಿಗೆ, ಅವರ ಕೌಶಲ್ಯಗಳ ಮೇಲೆ ಅವರನ್ನು ನಿರ್ಣಯಿಸಲಾಯಿತು. ಅವರು ಅತ್ಯಂತ ಕಾಳಜಿಯುಳ್ಳವರಾಗಿದ್ದರು ಮತ್ತು ಧಾರ್ಮಿಕ ಸ್ಥಳಗಳು ಮತ್ತು ಸಾಮಾನ್ಯ ಜನರ ಮನೆಗಳ ಮೇಲೆ ಎಂದಿಗೂ ದಾಳಿ ಮಾಡಲಿಲ್ಲ. ೧೬೭೪ರಲ್ಲಿ ರಾಯಘಡದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಿರೀಟಧಾರಣೆ ನಡೆಯಿತು.
ಕಿರೀಟಧಾರಣೆಯ ಬಳಿಕ ಛತ್ರಪತಿ ಶಿವಾಜಿ ಮಹಾರಾಜ್ ಇಡೀ ಪಶ್ಚಿಮಭಾರತವನ್ನು ತಮ್ಮ ಆಳ್ವಿಕೆಗೆ ತಂದರು. ಸ್ವಾಭಿಮಾನಿ ರಾಷ್ಟ ನಿರ್ಮಾಣಕ್ಕೆ ಹೋರಾಡಿದ ಶಿವಾಜಿ ೧೬೮೦ರಲ್ಲಿ ಕಾಲವಾದರೂ ಅವರು ಸ್ಥಾಪಿಸಿದ ಮರಾಠರಾಜ್ಯ ೧೮೧೮ರವರೆಗೆ ಉಜ್ವಲವಾಗಿ ಬೆಳಗಿತು ಎನ್ನಲಾಗಿದೆ.
ಶಿವಾಜಿ ಜಾತಿ-ಸಂಘರ್ಷಗಳ ವಿರುದ್ಧವಾಗಿದ್ದರು. ಆದರೆ, ಯಾವುದೇ ಧರ್ಮದ ವಿರುದ್ಧ ಅಲ್ಲ. ಆ ಸಮಯದಲ್ಲಿ, ಭಾರತದಲ್ಲಿನ ಎಲ್ಲಾ ರಾಜ್ಯಗಳು ತಮ್ಮ ಧಾರ್ಮಿಕ ನಂಬಿಕೆಗಳಿಗೆ ಅಂಟಿಕೊಳ್ಳುತ್ತಿದ್ದಾಗ, ಶಿವಾಜಿ ಎಲ್ಲಾ ಧರ್ಮಗಳನ್ನು ಒಪ್ಪಿಕೊಂಡರು. ಶಿವಾಜಿ ಮಹಾರಾಜರು ಎಲ್ಲಾ ಧರ್ಮಗಳಿಗೆ ಅವಕಾಶ ನೀಡಿದ್ದರೂ, ಅವರು ತಮ್ಮ ಸ್ವಂತ ಧಾರ್ಮಿಕ ನಂಬಿಕೆಗಳಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ವಾಸ್ತವವಾಗಿ, ಅವರು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಬಯಸುವ ಜನರಿಗೆ ಸಹಾಯ ಮಾಡಿದರು.
ಒಟ್ಟಾರೆಯಾಗಿ ಛತ್ರಪತಿ ಶಿವಾಜಿ ಮಹಾರಾಜರು ಮರಾಠಾ ಸಾಮ್ರಾಜ್ಯವನ್ನು ಒಪ್ಪಿಕೊಂಡರು ಅಷ್ಟೇ ಅಲ್ಲದೇ ಜನರ ಹೃದಯವನ್ನು ಆಳಿದರು. ಅವರು ಭಾರತೀಯ ಇತಿಹಾಸದ ಶ್ರೇಷ್ಠ ರಾಜರಲ್ಲಿ ಒಬ್ಬರು. ಅವರ ಸಾಧನೆಗಳು ಮುಂಬರುವ ಪೀಳಿಗೆಗೆ ಹೆಮ್ಮೆಯ ಭಾಗವಾಗಿದೆ. ಬಸವರಾಜ ಎಮ್.ಯರಗುಪ್ಪಿ.
ಬಿಆರ್‌ಪಿ-ಶಿರಹಟ್ಟಿ, ಲಕ್ಷ್ಮೇಶ್ವರ.
ಶಿವಾಜಿ ಗೆರಿಲ್ಲಾ ಯುದ್ಧದ ಪ್ರತಿಪಾದಕರಾಗಿದ್ದರು. ಅವರು ತಮ್ಮ ಪ್ರದೇಶದ ಭೌಗೋಳಿಕತೆ, ಗೆರಿಲ್ಲಾ ತಂತ್ರಗಳು, ಶತ್ರುಗಳೊಂದಿಗೆ ಸಣ್ಣ ಗುಂಪುಗಳ ಮೇಲೆ ದಾಳಿ ಮಾಡುವುದು ಇತ್ಯಾದಿಗಳನ್ನು ಚೆನ್ನಾಗಿ ತಿಳಿದಿದ್ದರು ಮತ್ತು ಅವರನ್ನು ಬೆಟ್ಟಗಳ ಇಲಿ ಎಂದು ಕರೆಯಲಾಯಿತು. ಆದಾಗ್ಯೂ, ಶಿವಾಜಿ ಎಂದಿಗೂ ಧಾರ್ಮಿಕ ಸ್ಥಳಗಳು ಅಥವಾ ಅಲ್ಲಿ ವಾಸಿಸುವ ಜನರ ಮನೆಗಳ ಮೇಲೆ ದಾಳಿ ಮಾಡಲಿಲ್ಲ. ಈ ಕಾರಣಕ್ಕಾಗಿ, ಅವನ ಸೈನ್ಯಕ್ಕೆ ವೈಯಕ್ತಿಕ ಕುದುರೆಗಳು ಮತ್ತು ಶಸ್ತಾçಸ್ತçಗಳನ್ನು ಒದಗಿಸಲಾಗಿಲ್ಲ.