ಟಿ20 ಕ್ರಿಕೆಟ್​ ಇತಿಹಾಸದಲ್ಲಿ ವಿಶೇಷ ದಾಖಲೆ ಬರೆದ ಶಿವಂ ದುಬೆ!

0
Spread the love

ಟಿ20 ಕ್ರಿಕೆಟ್​ ಇತಿಹಾಸದಲ್ಲಿ ಯಾರಿಂದಲೂ ಸಾಧ್ಯವಾಗದ ವಿಶೇಷ ವಿಶ್ವ ದಾಖಲೆಯನ್ನು ಶಿವಂ ದುಬೆ ಮಾಡಿದ್ದಾರೆ.

Advertisement

ಹೌದು, ಟಿ20 ಕ್ರಿಕೆಟ್​ನಲ್ಲಿ ಸತತ 30 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ ವಿಶ್ವದ ಮೊದಲ ಆಟಗಾರನೆಂಬ ವಿಶ್ವ ದಾಖಲೆ ಶಿವಂ ದುಬೆ ಪಾಲಾಗಿದೆ. ಅಂದರೆ ದುಬೆ ಕಣಕ್ಕಿಳಿದ ಕಳೆದ 30 ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಒಮ್ಮೆಯೂ ಸೋತಿಲ್ಲ.

ಜನವರಿ 2020 ರಿಂದ ಶುರುವಾದ ಈ ಗೆಲುವಿನ ನಾಗಾಲೋಟ ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿವರೆಗೆ ಮುಂದುವರೆದಿದೆ. 2020 ರಲ್ಲಿ ಟೀಮ್ ಇಂಡಿಯಾ ನ್ಯೂಝಿಲೆಂಡ್ ತಂಡವನ್ನು 5-0 ಅಂತರದಿಂದ ಸೋಲಿಸಿದಾಗ ದುಬೆ ಭಾರತ ತಂಡದ ಭಾಗವಾಗಿದ್ದರು.

ಇನ್ನು 2024 ರಲ್ಲಿ ಟೀಮ್ ಇಂಡಿಯಾ ಆಡಿದ 15 ಪಂದ್ಯಗಳಲ್ಲಿ ದುಬೆ ಕಣಕ್ಕಿಳಿದಿದ್ದರು. ಈ ಎಲ್ಲಾ ಮ್ಯಾಚ್​ಗಳಲ್ಲೂ ಟೀಮ್ ಇಂಡಿಯಾ ಗೆಲುವು ದಾಖಲಿಸಿದೆ. ಹಾಗೆಯೇ ಟಿ20 ವಿಶ್ವಕಪ್​ 2024ರಲ್ಲಿ ಭಾರತ ತಂಡವು 8 ಗೆಲುವುಗಳೊಂದಿಗೆ ವಿಶ್ವ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. ಈ ಎಲ್ಲಾ ಪಂದ್ಯಗಳಲ್ಲೂ ದುಬೆ ಕಣಕ್ಕಿಳಿದಿದ್ದರು.

ಇದೀಗ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ದುಬೆ ಕಣಕ್ಕಿಳಿದಿದ್ದಾರೆ. ಈ ಮ್ಯಾಚ್​ಗಳಲ್ಲೂ ಟೀಮ್ ಇಂಡಿಯಾ ಗೆಲುವು ದಾಖಲಿಸಿದೆ. ಇದರೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಸತತ 30 ಪಂದ್ಯಗಳಲ್ಲಿ ಗೆಲುವು ನೋಡಿದ ವಿಶ್ವದ ಮೊದಲ ಆಟಗಾರ ಎಂಬ ವಿಶ್ವ ದಾಖಲೆ ಶಿವಂ ದುಬೆ ಪಾಲಾಯಿತು.


Spread the love

LEAVE A REPLY

Please enter your comment!
Please enter your name here