ಶಿವಮೊಗ್ಗ: ಖಾತೆ ಮಾಡಿಕೊಡಲು ಲಂಚ ಪಡೆಯುತಿದ್ದ ಪಿಡಿಓ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಶಿವಮೊಗ್ಗದ ಸೊರಬದಲ್ಲಿ ನಡೆದಿದೆ. ಸೊರಬ ತಾಲೂಕಿನ ಇಂಡುವಳ್ಳಿ ಗ್ರಾಮದ ಪಿಡಿಓ ಈಶ್ವರಪ್ಪ ಬಂಧಿತ ಅಧಿಕಾರಿಯಾಗಿದ್ದು, ತಂದೆ ಜಮೀನು ತಾಯಿ ಹೆಸರಿನಲ್ಲಿ ಈ ಖಾತಾ ಮಾಡಿಕೊಡಲು ಮಹಮ್ಮದ್ ಗೌಸ್ ಎಂಬುವವರಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
Advertisement
ಇಂದು ಬೆಳಿಗ್ಗೆ ಸೊರಬ ಪೋಸ್ಟ್ ಆಫೀಸ್ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ಕುರಿತು ಲೋಕಾಯುಕ್ತ ಪೊಲೀಸ್ ಇನ್ಸಪೆಕ್ಟರ್ ಹೆಚ್. ಎಸ್. ಸುರೇಶ್ ಅವರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.