ಶಿವಮೊಗ್ಗ:– ನಿವೃತ್ತಿ ದಿನವೇ ಲಂಚ ಸ್ವೀಕರಿಸಲು ಹೋಗಿ ಸ್ಮಾರ್ಟ್ ಸಿಟಿ ಅಧಿಕಾರಿ ‘ಲೋಕಾ’ ಬಲೆಗೆ ಬಿದ್ದಿರುವ ಘಟನೆ ನಗರದ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಜರುಗಿದೆ.
Advertisement
ಕೃಷ್ಣಪ್ಪ ‘ಲೋಕಾ’ ಬಲೆಗೆ ಬಿದ್ದ ಸ್ಮಾರ್ಟ್ ಸಿಟಿ ಮುಖ್ಯಸ್ಥ. ಶಿವಮೊಗ್ಗ ನಗರದಲ್ಲಿ ಟಿವಿ, ಎಲ್‍ಇಡಿ ಪರದೆ ಅಳವಡಿಸುವ ಸಂಬಂಧ ಬಿಲ್ ಮಾಡಲು ಮುಂಬೈ ಮೂಲದ ಕಂಪನಿ ಬಳಿ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಪಡೆಯುವಾಗ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಹಣ ಕೊಡದೇ ಇದ್ದರೆ, ಮುಂಬೈ ಮೂಲದ ಕಂಪನಿ ಸರಿಯಾಗಿ ಸರ್ವಿಸ್ ಮಾಡಿಲ್ಲ ಎಂದು ಷರಾ ಬರೆಯುವುದಾಗಿ ಅವರು ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ.
ಸ್ಮಾರ್ಟ್ ಸಿಟಿ ಮುಖ್ಯಸ್ಥನಾಗಿದ್ದ ಕೃಷ್ಣಪ್ಪ, ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಿಗೆ ಇಂದು ಅಧಿಕಾರ ಹಸ್ತಾಂತರಿಸಿ ನಿವೃತ್ತಿ ಪಡೆಯಬೇಕಿತ್ತು. ಆದರೆ ಲಂಚದ ಆಸೆಯಿಂದ ಕೊನೆಯ ದಿನ ಅರೆಸ್ಟ್ ಆಗಿದ್ದಾರೆ.