ಶಿವಮೊಗ್ಗ: ಬಸ್ ಹಾಗೂ ಬೈಕ್ ಡಿಕ್ಕಿಯಾಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ನಗರದ ಸರ್ಕ್ಯೂಟ್ ಹೌಸ್ ಸರ್ಕಲ್ ನಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಸೊರಬ ತಾಲೂಕು ಬೆಣ್ಣೆಗೆರೆ ನಿವಾಸಿ ರೋಹಿತ್ (26) ಹಾಗೂ ಹಾವೇರಿ ಜಿಲ್ಲೆ ಮಲೆಬೆನ್ನೂರು ತಾಲೂಕು ಬೇವಿನಹಳ್ಳಿ ಗ್ರಾಮದ ಜೀವನ್ (20) ಮೃತ ದುರ್ಧೈವಿಗಳಾಗಿದ್ದು,
Advertisement
ಇನ್ನೂ ಶಿವಮೊಗ್ಗದ ಬೊಮ್ಮನಕಟ್ಟೆಯ ತಮ್ಮ ಸಂಬಂಧಿಗಳ ಮನೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಅಪಘಾತದಲ್ಲಿ ರೋಹಿತ್ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಜೀವನ್ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನ ಪ್ಪಿದ್ದಾರೆ. ಘಟನೆ ಸಂಬಂಧ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.