ಚಿಕ್ಕಮಗಳೂರು:- ಲಿವಿಂಗ್ ರಿಲೇಷನ್‌ಶಿಪ್ ನಲ್ಲಿದ್ದ ಯುವತಿಗೆ ಮೋಸ ಮಾಡಿ ಮತ್ತೊಂದು ಮದುವೆ ಆಗುತ್ತಿದ್ದ ಯುವಕನಿಗೆ ಮಂಟಪದಲ್ಲೇ ಶಾಕ್ ಎದುರಾಗಿದೆ.
ಎಸ್, ಚಿಕ್ಕಮಗಳೂರಿನಲ್ಲಿ ನಡೆದಿರುವ ಘಟನೆ ಇದಾಗಿದೆ. ಶಿಕ್ಷಕ ಶರತ್ ತನ್ನ ಲಿವಿಂಗ್ ರಿಲೇಷನ್‌ಶಿಪ್ ಪಾರ್ಟ್‌ನರ್ ಅಶ್ವಿನಿಗೆ ಮೋಸ ಮಾಡಿ, ಬೇರೊಬ್ಬರನ್ನು ಮದುವೆಯಾಗಲು ಮುಂದಾಗಿದ್ದಾನೆ. ಇಬ್ಬರು ಕೂಡ ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಇಬ್ಬರ ನಡುವೆ ಸ್ನೇಹ ಬೆಳೆದಿದೆ. ಕಾಲೇಜು ಮುಗಿದ ನಂತರವೂ ಇಬ್ಬರು ಸಂಪರ್ಕದಲ್ಲಿದ್ದರು. ಈ ವೇಳೆ ಶರತ್ ಮದುವೆ ಆಗಿ, ಪತ್ನಿಯಿಂದ ವಿಚ್ಛೇಧನ ಪಡೆದಿದ್ದ. ಇದರ ನಡುವೆ ಅಶ್ವಿನಿ ಜತೆಗೆ ಪ್ರೀತಿ ನಿವೇದನೆ ಮಾಡಿಕೊಂಡು ಮದುವೆ ಆಗುವೆ ಎಂದು ಭರವಸೆ ನೀಡಿದ್ದಾನೆ. ಇಬ್ಬರು 4 ವರ್ಷದಿಂದ ಪರಸ್ವರ ಲಿವಿಂಗ್ ರಿಲೇಷನ್ಶಿಪ್ನಲ್ಲಿದ್ದರು. ಇದೀಗ ಅಶ್ವಿನಿಗೂ ಕೈಕೊಟ್ಟು ಬೇರೊಂದು ಯುವತಿಯನ್ನು ಮದುವೆಯಾಗಲು ಮುಂದಾಗಿದ್ದಾನೆ.
ಶರತ್ ನಾಳೆ ಅದ್ದೂರಿಯಾಗಿ (ಡಿ.14) ಮದುವೆಯಾಗಲು ತಯಾರಿ ಮಾಡಿಕೊಂಡಿದ್ದಾನೆ. ಮನೆಯ ಮುಂದೆ ಚಪ್ಪರ ಹಾಕಿಕೊಂಡು ಸಂಭ್ರಮದಲ್ಲಿದ್ದ ಶರತ್ಗೆ ಅಶ್ವಿನಿ ಇದೀಗ ಬಿಗ್ ಶಾಕ್ ನೀಡಿದ್ದಾಳೆ. ತನ್ನ ಪರ ವಕೀಲರನ್ನು ಶರತ್ ಮನೆ ಬಳಿ ಕರೆದುಕೊಂಡು ಬಂದು ಶರತ್ಗೆ ಚಳಿಬಿಡಿಸಲು ಮುಂದಾಗಿದ್ದಾಳೆ. ಆದರೆ ಅಶ್ವಿನಿ ಮನೆ ಬಳಿ ಬರುತ್ತಿದ್ದಂತೆ ಶರತ್ ಮನೆಯಿಂದ ಪರಾರಿಯಾಗಿದ್ದಾನೆ. ತನಗೆ ನ್ಯಾಯ ಸಿಗುವವರೆಗೆ ಇಲ್ಲಿಂದ ಹೋಗಲ್ಲ ಎಂದು ಹಠ ಹಿಡಿದು ಮನೆ ಮುಂದೆ ಪ್ರತಿಭಟನೆ ಮಾಡಿದ್ದಾಳೆ. ಅಶ್ವಿನಿ, ಶರತ್ ವಿರುದ್ಧ ಆಲ್ದೂರು ಠಾಣೆಯಲ್ಲಿ ದೂರು ನೀಡಿದ್ದಾಳೆ. ಇದೀಗ ಶರತ್ ಮೇಲೆ ಎಫ್ಐಆರ್ ದಾಖಲಾಗಿದೆ.



