ಕಳೆದ ಕೆಲವು ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ದರ ಇದೀಗ ಮತ್ತೆ ಏರಿಕೆ ಆಗಿದ್ದು, ಗೋಲ್ಡ್ ಪ್ರಿಯರು ಆಘಾತಕ್ಕೊಳಗಾಗಿದ್ದಾರೆ.
ಚಿನ್ನದ ಬೆಲೆ ಕುಸಿದು ಬೀಳುತ್ತೆ… ಚಿನ್ನದ ಬೆಲೆ ಕುಸಿದು ಬೀಳುತ್ತೆ… ಅಂತಾ ಕಾಯುತ್ತಿದ್ದ ಜನರಿಗೆ ಈಗ ಚಿನ್ನದ ಬೆಲೆ ಭಾರಿ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿರುವುದು ಆಘಾತ ನೀಡಿದೆ. ಚಿನ್ನದ ಬೆಲೆ 11,400 ರೂಪಾಯಿ ಭಾರಿ ಏರಿಕೆ ಆಗಿರೋದು ಗೋಲ್ಡ್ ಪ್ರಿಯರನ್ನು ಕಂಗಾಲಾಗುವಂತೆ ಮಾಡಿದೆ. 24 ಕ್ಯಾರೆಟ್ ಅಂದ್ರೆ ಶುದ್ಧ ಚಿನ್ನ ಬೆಲೆ ಇದೀಗ ಪ್ರತಿ 100 ಗ್ರಾಂಗೆ 11,400 ರೂಪಾಯಿ ಏರಿಕೆ ಕಾಣುವ ಮೂಲಕ, ಬರೋಬ್ಬರಿ 9,84,000 ರೂಪಾಯಿಗೆ ತಲುಪಿದೆ. ಹಾಗೇ 10 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಬರೋಬ್ಬರಿ 1,140 ರೂಪಾಯಿ ಏರಿಕೆ ಕಾಣುವ ಮೂಲಕ 98,400 ರೂಪಾಯಿ ಆಗಿದೆ
ಬೆಲೆ ಏರಿಕೆ ನಂತರ ಬೆಂಗಳೂರಲ್ಲಿ ಈಗ ಪ್ರತಿ 10 ಗ್ರಾಂ 22 ಕ್ಯಾರಟ್ ಆಭರಣ ಚಿನ್ನ ಬೆಲೆ 90,200 ರೂಪಾಯಿ ಆಗಿದೆ. ಈ ಮೂಲಕ ಆಭರಣ ಚಿನ್ನ ಬೆಲೆ ಕೂಡ ಇನ್ನೇನು 1,00,000 ರೂಪಾಯಿ ತಲುಪುವುದು ಗ್ಯಾರಂಟಿ ಆಗಿದೆ. ಈ ನಡುವೆ ಚಿನ್ನದ ಬೆಲೆಯು ಇಳಿಕೆ ಕಾಣಬಹುದು, ಆಷಾಢ ಮಾಸ ಹಿನ್ನೆಲೆ ಚಿನ್ನ ಖರೀದಿಗೆ ಪ್ಲಾನ್ ಮಾಡಬಹುದು ಅಂತಾ ಆಲೋಚನೆ ಇಟ್ಟುಕೊಂಡಿದ್ದ ಚಿನ್ನ ಪ್ರಿಯರಿಗೆ ಇದೀಗ ಮತ್ತೊಂದು ಶಾಕ್ ಸಿಕ್ಕಂತೆ ಆಗಿದೆ. ಮತ್ತೊಂದು ಕಡೆ ಬೆಳ್ಳಿ ಬೆಲೆಯು ಒಂದೇ ದಿನ ಪ್ರತಿ 1 ಕೆಜಿ 2,300 ರೂಪಾಯಿ ಏರಿಕೆ ಕಾಣುವ ಮೂಲಕ 1,10,000 ರೂಪಾಯಿಗೆ ತಲುಪಿದೆ. ಈ ಮೂಲಕ ಚಿನ್ನ ಮತ್ತು ಬೆಳ್ಳಿ ಎರಡರ ಬೆಲೆಯೂ ಭಾರಿ ಏರಿಕೆ ಕಾಣುತ್ತಿದ್ದು, ಯಾವಾಗ ಬೆಲೆ ಇಳಿಕೆ ಕಾಣುತ್ತೆ ಅಂತಾ ಕಾಯಬೇಕಿದೆ.