ಭಾರತ ಮತ್ತು ಪಾಕ್ ನಡುವೆ ಯುದ್ಧ ಬಿಕ್ಕಟ್ಟು ಹಿನ್ನೆಲೆಯಲ್ಲಿ ಇತ್ತೀಚೆಗೆ ಐಪಿಎಲ್ನ ಎಲ್ಲಾ ಪಂದ್ಯಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಮೇ 17 ರಿಂದ ಪಂದ್ಯಗಳು ಪುನರಾರಂಭದ ಜೊತೆಗೆ ಉಳಿದ ಮ್ಯಾಚ್ಗಳ ರಿಶೆಡ್ಯೂಲ್ ಕೂಡ ಆಗಿದೆ. ಅಂತೆಯೇ ಮೇ 17 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಆರ್ಸಿಬಿ ಸೆಣಸಾಟ ನಡೆಸಲಿವೆ.
ಪಂದ್ಯಕ್ಕೆ ನಾಯಕ ರಜತ್ ಪಾಟೀದಾರ್ ಆಡೋದು ಅನುಮಾನ ಎಂದು ಹೇಳಲಾಗುತ್ತಿದೆ. ಪಾಟೀದಾರ್ಗೆ ಆಗಿದ್ದೇನು ಅಂತಾ ನೋಡೋದಾದರೆ, ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆರ್ಸಿಬಿ ಎದುರಿಸಿತ್ತು. ಈ ವೇಳೆ ನಾಯಕ ಪಾಟೀದಾರ್, ಬೆರಳಿಗೆ ಗಾಯವಾಗಿದೆ. ಈ ಗಾಯವು ಇನ್ನೂ ಸರಿಯಾಗಿ ವಾಸಿ ಆಗಿಲ್ಲ ಎಂದು ಹೇಳಲಾಗುತ್ತಿದೆ.
ಹಾಗಾಗಿ ಕೆಕೆಆರ್ ವಿರುದ್ಧ ಆಡಲ್ಲ ಎನ್ನಲಾಗುತ್ತಿದೆ. ರಜತ್ ಬದಲಿಗೆ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಆರ್ಸಿಬಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಇನ್ನೂ ಖಚಿತ ಮಾಹಿತಿ ಹೊರ ಬಂದಿಲ್ಲ.