ಚಿನ್ನದ ಬೆಲೆಗಳು ಹೆಚ್ಚುವುದು ಹೊಸ ವಿಷಯವಲ್ಲ, ಆದರೆ ಈಗ ಬೆಳ್ಳಿಯ ದರ ಕೂಡ ಗಗನಕ್ಕೇರಿದೆ.
ಎಸ್, ಕಳೆದ ಕೆಲವು ದಿನಗಳಿಂದ ಬೆಳ್ಳಿ ಬೆಲೆ ದಿನದಿಂದ ದಿನಕ್ಕೆ ಏರುತ್ತಿದ್ದು, ಖರೀದಿದಾರರು ತಲೆ ಮೇಲೆ ಕೈ ಹಿಡಿದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಒಮ್ಮೆ ಜ್ಯುವೆಲರಿಗೆ ಹೋಗಿ ಬೆಲೆ ಕೇಳಿದರೆ ಸಾಕು — ಗ್ರಾಹಕರು ಬೆಲೆ ಕೇಳಿ ವಾಪಸ್ ಬರುವಂತಾಗಿದೆ. ಇಷ್ಟು ದಿನ ಚಿನ್ನದ ಆಭರಣ ಖರೀದಿಸಲು ಯೋಚನೆ ಮಾಡುತ್ತಿದ್ದ ಜನರು, ಈಗ ಬೆಳ್ಳಿಯ ಆಭರಣಗಳಿಗೂ ಕೈ ಮುಗಿದುಕೊಳ್ಳುವಂತಾಗಿದೆ.
ವ್ಯಾಪಾರಿಗಳ ಪ್ರಕಾರ, ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಲೆ ಏರಿಕೆ ಹಾಗೂ ಹಣಕಾಸು ನೀತಿಯ ಪರಿಣಾಮದಿಂದ ಬೆಳ್ಳಿಯ ದರವು ದಾಖಲೆ ಮಟ್ಟ ತಲುಪಿದೆ. ಇದರಿಂದ ಮುಂದಿನ ದಿನಗಳಲ್ಲಿ ಚಿನ್ನ-ಬೆಳ್ಳಿ ಆಭರಣ ಧರಿಸುವುದು ಬಹುತೇಕ ಕನಸಿನ ಮಾತಾಗಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.
ಇದೀಗ ಬಂದಿರುವ ನವೀಕೃತ ದರ ಪ್ರಕಾರ — ಬೆಳ್ಳಿಯ ಬೆಲೆ ನಿನ್ನೆಗಿಂತಲೂ ಹೆಚ್ಚು ಏರಿದೆ.
ಇಂದಿನ(ಮಂಗಳವಾರ) ಬೆಳ್ಳಿ ದರ ಹೀಗೆ ಇದೆ:
1 ಗ್ರಾಂ ಬೆಳ್ಳಿ — ₹193.60 (ನಿನ್ನೆ ₹185), ಅಂದರೆ ₹8.60 ಏರಿಕೆ.
8 ಗ್ರಾಂ — ₹1,548.80 (ನಿನ್ನೆ ₹1,480), ಅಂದರೆ ₹68.80 ಏರಿಕೆ.
10 ಗ್ರಾಂ — ₹1,936 (ನಿನ್ನೆ ₹1,850), ಅಂದರೆ ₹86 ಏರಿಕೆ.
100 ಗ್ರಾಂ — ₹19,360 (ನಿನ್ನೆ ₹18,500), ₹860 ಏರಿಕೆ.
1 ಕಿಲೋ — ₹1,93,600 (ನಿನ್ನೆ ₹1,85,000), ಅಂದರೆ ₹8,600 ಏರಿಕೆ.
ಅಂದರೆ ಕೇವಲ ಒಂದು ದಿನದಲ್ಲೇ ಬೆಳ್ಳಿಯ ದರ ಗಗನಕ್ಕೇರಿದೆ. ಚಿನ್ನದ ಬೆಲೆ ಈಗಾಗಲೇ ಏರಿಕೆಯಲ್ಲಿ ಇದ್ದರೂ, ಇಷ್ಟು ವೇಗದಲ್ಲಿ ಬೆಳ್ಳಿಯೂ ಏರಿದ್ದು ಗ್ರಾಹಕರಿಗೆ ಹೊಸ ಆಘಾತವಾಗಿದೆ.