ಆಘಾತಕಾರಿ ಘಟನೆ: ನಡು ರಸ್ತೆಯಲ್ಲಿ ಅಡ್ಡಗಟ್ಟಿ ರೌಡಿಶೀಟರ್‌ ಬರ್ಬರ ಕೊಲೆ!

0
Spread the love

ಚೆನ್ನೈ:- ತಮಿಳುನಾಡಿನ ಈರೋಡ್‌ನಲ್ಲಿ ಆಘಾತಕಾರಿ ಘಟನೆ ಒಂದು ಜರುಗಿದೆ. ನಡು ರಸ್ತೆಯಲ್ಲಿ ರೌಡಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

Advertisement

ಕೊಲೆಯಾದ ರೌಡಿಶೀಟರ್ ನನ್ನು ಜಾನ್ ಅಲಿಯಾಸ್ ಚಾಣಕ್ಯನ್ ಎಂದು ಗುರುತಿಸಲಾಗಿದೆ. ಬುಧವಾರ ಬೆಳಗ್ಗೆ ಸೇಲಂನಿಂದ ತಿರುಪುರಕ್ಕೆ ಜಾನ್ ದಂಪತಿ ಕಾರಿನಲ್ಲಿ ತೆರಳುತ್ತಿದ್ದರು. ಮಧ್ಯಾಹ್ನ ಗೌಡಮ್ ಪಾಳ್ಯಮ್ ಬಳಿ ಹೆದ್ದಾರಿಯಲ್ಲಿ ರೌಡಿಗಳು ದಾಳಿ ನಡೆಸಿದ್ದಾರೆ. ಕಾರನ್ನು ಹಿಂಬಾಲಿಸಿಕೊಂಡು ಬಂದ ನಾಲ್ಕು ಮಂದಿ ಜಾನ್‌ ಕಾರನ್ನು ತಡೆದು ನಿಲ್ಲಿಸಿ ಮನಬಂದಂತೆ ಮಾರಾಕಾಸ್ತ್ರಗಳಿಂದ ಥಳಿಸಿದ್ದಾರೆ.

ಈ ವೇಳೆ ಪತಿಯನ್ನು ಉಳಿಸಿಕೊಳ್ಳಲು ಅಡ್ಡ ಬಂದ ಪತ್ನಿ ಮೇಲು ಸಹ ದಾಳಿ ಮಾಡಿದ್ದಾರೆ. ಜಾನ್‌ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಪತ್ನಿ ಗಂಭೀರ ಗಾಯಗೊಂಡಿದ್ದಾರೆ. ಪತ್ನಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಚಿತ್ತೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here