ಆಘಾತಕಾರಿ ಘಟನೆ: 5 ವರ್ಷದ ಬಾಲಕಿ ಕತ್ತು ಸೀಳಿ ದೇವಾಲಯದ ಮೆಟ್ಟಿಲುಗಳಿಗೆ ರಕ್ತ ಅರ್ಪಿಸಿದ ಪಾಪಿ!

0
Spread the love

ಗಾಂಧಿನಗರ:- ಗುಜರಾತ್‌ನ ಛೋಟೌದೇಪುರ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಜರುಗಿದೆ. ವ್ಯಕ್ತಿಯೊಬ್ಬ ಐದು ವರ್ಷದ ಬಾಲಕಿಯ ಕತ್ತು ಸೀಳಿ ಕೊಲೆ ಮಾಡಿ, ದೇವಾಲಯದ ಮೆಟ್ಟಿಲುಗಳ ಮೇಲೆ ರಕ್ತ ಅರ್ಪಿಸಿದ ಘಟನೆ ಜರುಗಿದೆ.

Advertisement

ಹತ್ಯೆಗೈದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನನ್ನು ಲಾಲಾ ತಡ್ವಿ ಎಂದು ಗುರುತಿಸಲಾಗಿದೆ. ಆರೋಪಿ, ಬುಡಕಟ್ಟು ಪ್ರಾಬಲ್ಯ ಹೊಂದಿರುವ ಜಿಲ್ಲೆ ಪನೇಜ್ ಗ್ರಾಮದಲ್ಲಿ ಬೆಳಿಗ್ಗೆ ಆಕೆಯ ತಾಯಿಯ ಎದುರೇ ಬಾಲಕಿಯನ್ನು ಆಕೆಯ ಮನೆಯಿಂದ ಅಪಹರಿಸಿದ್ದಾನೆ. ಬಳಿಕ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು, ಕೊಡಲಿಯಿಂದ ಆಕೆಯ ಕುತ್ತಿಗೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಬಳಿಕ ಬಾಲಕಿಯ ಕುತ್ತಿಗೆಯಿಂದ ಹೊರಬರುತ್ತಿದ್ದ ರಕ್ತವನ್ನು ಸಂಗ್ರಹಿಸಿ, ಅದರಲ್ಲಿ ಸ್ವಲ್ಪ ಭಾಗವನ್ನು ತನ್ನ ಮನೆಯಲ್ಲಿರುವ ದೇವಾಲಯದ ಮೆಟ್ಟಿಲುಗಳ ಮೇಲೆ ಅರ್ಪಿಸಿದ್ದಾನೆ. ಆರೋಪಿಯು ಮಾಂತ್ರಿಕನಂತೆ ಕಾಣುತ್ತಿಲ್ಲ, ಮತ್ತು ಕೊಲೆಯ ಹಿಂದಿನ ನಿಖರವಾದ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸರ ತನಿಖೆಯಿಂದ ಸತ್ಯ ಹೊರಬರಬೇಕಾಗಿದೆ.


Spread the love

LEAVE A REPLY

Please enter your comment!
Please enter your name here