ಆಘಾತಕಾರಿ ಘಟನೆ: ದೆಹಲಿಯಲ್ಲಿ ತ್ರಿವಳಿ ಕೊಲೆ; ಇಬ್ಬರು ಮಕ್ಕಳು, ಹೆಂಡ್ತಿ ಕೊಂದು ಗಂಡ ಎಸ್ಕೇಪ್!

0
Spread the love

ದೆಹಲಿ:- ಪತಿಯೋರ್ವ ತನ್ನ ಹೆಂಡತಿ ಹಾಗೂ ತನ್ನ ಇಬ್ಬರು ಮಕ್ಕಳನ್ನು ಕೊಂದು ಎಸ್ಕೇಪ್ ಆಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ಕರವಾಲ್ ನಗರದಲ್ಲಿ ಜರುಗಿದೆ.

Advertisement

ಪ್ರದೀಪ್ ಬಂಧಿತ ಆರೋಪಿ. ಈತ ತನ್ನ ಪತ್ನಿ ಜಯಶ್ರೀ ಮತ್ತು ಐದು ಮತ್ತು ಏಳು ವರ್ಷದ ಪುತ್ರಿಯರನ್ನು ಕೊಂದಿದ್ದಾರೆ. ಸದ್ಯದ ಮಾಹಿತಿಯ ಪ್ರಕಾರ, ದಂಪತಿಯ ನಡುವೆ ಜಗಳವಾಗಿದ್ದು, ನಂತರ ಪ್ರದೀಪ್ ಈ ಕೊಲೆ ಮಾಡಿದ್ದಾರೆ.

ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರದೀಪ್ ಬಂಧನಕ್ಕೆ ಹುಡುಕಾಟ ಆರಂಭಿಸಿದ್ದಾರೆ. ಇದರ ಜೊತೆಗೆ, 3 ಜನರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. “ದೆಹಲಿಯ ಕರವಾಲ್ ನಗರ ಪ್ರದೇಶದಲ್ಲಿ ಪ್ರದೀಪ್ ಎಂಬ ವ್ಯಕ್ತಿ ತನ್ನ ಪತ್ನಿ, 5 ಮತ್ತು 7 ವರ್ಷದ ಇಬ್ಬರು ಹೆಣ್ಣುಮಕ್ಕಳನ್ನು ಕೊಂದಿದ್ದಾರೆ. ಬಳಿಕ ಅವರು ತಲೆಮರೆಸಿಕೊಂಡಿದ್ದು, ಆರೋಪಿಗೆ ಶೋಧ ಕಾರ್ಯ ನಡೆದಿದೆ.


Spread the love

LEAVE A REPLY

Please enter your comment!
Please enter your name here