ಹೈದರಾಬಾದ್:– ಆನ್‌ಲೈನ್ ಲುಡೋ ಗೇಮ್‌ನಲ್ಲಿ 5 ಲಕ್ಷ ರೂ. ಹಣವನ್ನು ಕಳೆದುಕೊಂಡ ನಂತರ 23 ವರ್ಷದ ಯುವಕ ವಿಷ ಸೇವಿಸಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್ನಲ್ಲಿ ಜರುಗಿದೆ.
ರೋಸ್ಟ್ ಕೆಫೆಯಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷದ ಗಡ್ಡಮೀಡಿ ವೆಂಕಟೇಶ್ ಮೃತ ಯುವಕ. ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್‌ನಲ್ಲಿ ಲುಡೋ ಗೇಮ್‌ನಲ್ಲಿ ಭಾರೀ ಹಣ ಕಳೆದುಕೊಂಡ ನಂತರ ಆ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವೆಂಕಟೇಶ್ ಮೂಲತಃ ಮಹಬೂಬ್‌ನಗರ ಜಿಲ್ಲೆಯ ನರ್ವಾ ಮಂಡಲದ ಜಕ್ಲರ್ ಗ್ರಾಮದವನು. ಅವನು 4 ವರ್ಷಗಳ ಹಿಂದೆ ಹೈದರಾಬಾದ್‌ಗೆ ತೆರಳಿದ್ದ. ಅಲ್ಲಿ ಅವನು ರೋಸ್ಟ್ ಕೆಫೆಯಲ್ಲಿ ತೋಟಗಾರನಾಗಿ ಕೆಲಸ ಮಾಡುತ್ತಿದ್ದ. ವೆಂಕಟೇಶ್ ಮೊಬೈಲ್ ಅಪ್ಲಿಕೇಶನ್ ಮೂಲಕ ಲುಡೋ ಆಟವನ್ನು ಆಡುತ್ತಿದ್ದನು. ಅಲ್ಲಿ ಬೆಟ್ಟಿಂಗ್ ಮಾಡಿದ್ದ. ಅವನು ಆಟವಾಡುವಾಗ 5 ಲಕ್ಷ ರೂಪಾಯಿಗಳನ್ನು ಕಳೆದುಕೊಂಡನು. ಅಪಾರ ಆರ್ಥಿಕ ನಷ್ಟದಿಂದ ತೀವ್ರವಾಗಿ ಮನನೊಂದ ಅವನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡು, ವಿಷ ಸೇವಿಸಿ ತನ್ನ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾನೆ ಎನ್ನಲಾಗಿದೆ. ಈ ಘಟನೆಯು ಅವನ ಕುಟುಂಬ ಮತ್ತು ಸ್ನೇಹಿತರನ್ನು ಆಘಾತಗೊಳಿಸಿದೆ ಎಂದು ವರದಿಯಾಗಿದೆ.