ಬೆಂಗಳೂರಿಗರಿಗೆ ಶಾಕಿಂಗ್‌ ನ್ಯೂಸ್:‌ ನೀರಿನ ದರ 1 ಪೈಸೆ ಹೆಚ್ಚಳ – ಡಿ.ಕೆ ಶಿವಕುಮಾರ್‌

0
Spread the love

ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಗೆ ಜಲಮಂಡಳಿ ಮತ್ತೊಂದು ಶಾಕ್ ನೀಡಲು ಮುಂದಾಗಿದೆ.‌ ನಾನು 1 ಪೈಸೆ ಏರಿಕೆ ಮಾಡಲು ಒಪ್ಪಿಗೆ ಕೊಟ್ಡಿದ್ದೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ ಹೇಳೀದ್ದಾರೆ. ವಿಧಾನ ಸಭೆ ಕಲಾಪದಲ್ಲಿ ಶೂನ್ಯ ವೇಳೆಯಲ್ಲಿ ಉತ್ತರಿಸಿದ ಡಿಕೆ ಶಿವಕುಮಾರ್,

Advertisement

ಸೂಕ್ತ ಕಾಲದಲ್ಲಿ ಸೂಕ್ತ ಪ್ರಶ್ನೆ ಕೇಳಿದ್ದಾರೆ. ನಾನು ಕಳೆದ ವರ್ಷ ಇದಕ್ಕೆ ಬ್ರೇಕ್ ಹಾಕಿದ್ದೆ, ಈಗ ಇದರ ಬಗ್ಗೆ ಒಂದು ತಿಂಗಳು ಕ್ಯಾಂಪೇನ್ ಮಾಡಲು ನಿರ್ಧಾರ ಮಾಡಿದ್ದೇವೆ. ಕಳೆದ ವರ್ಷ ಅಪಾರ್ಟ್‌ಮೆಂಟ್‌ನವರು BWSSB ಗೆ ದುಡ್ಡು ‌ಕಟ್ಟಿಲ್ಲ ಎಂದರು.

ಅಪಾರ್ಟ್‌ಮೆಂಟ್‌ಗಳಲ್ಲಿ ಕೆಲವರು ಯಾವುದೇ ಅನುಮತಿ‌ ಇಲ್ಲದೇ ಬೋರ್‌ವೆಲ್‌ ಕೊರೆದಿದ್ದಾರೆ. ಅವರಿಗೆ ನೊಟೀಸ್ ಕೊಡುವ ಕೆಲಸ ಮಾಡಿದ್ದೇವೆ. 2014 ರಿಂದ ಇಲ್ಲಿವರೆಗೂ ನೀರಿನ ದರ ಏರಿಕೆ ಮಾಡಿಲ್ಲ. ಹೀಗಾಗಿ 1 ಪೈಸೆ ಆದರು ಜಾಸ್ತಿ ಮಾಡಬೇಕು ಅಂತ ತೀರ್ಮಾನ ಮಾಡಲಾಗಿದೆ. 6-7 ಪೈಸೆ ಜಾಸ್ತಿ ಮಾಡಬೇಕು ಅಂತ BWSSB ಅವರು ಮನವಿ ಮಾಡಿದ್ರು.

ನಾನು 1 ಪೈಸೆ ಏರಿಕೆ ಮಾಡಲು ಒಪ್ಪಿಗೆ ಕೊಟ್ಡಿದ್ದೇನೆ ಎಂದು ವಿವರಿಸಿದರು. ಈಗ ಬಿಬಿಎಂಪಿ ಬಜೆಟ್ ಮೀಟಿಂಗ್ ಮಾಡುತ್ತೇನೆ. ಆಗ ಬೆಂಗಳೂರಿನ ಎಲ್ಲಾ ಶಾಸಕರ ಸಭೆ ಕರೆದು ನಿರ್ಧಾರ ಮಾಡ್ತೀವಿ. ಅಂಡರ್ ಗ್ರೌಂಡ್ ವಾಟರ್ ಹೆಚ್ಚಿಸಲು ಎಲ್ಲಾ ಕೆರೆ ತುಂಬಿಸೋ ಯೋಚನೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.


Spread the love

LEAVE A REPLY

Please enter your comment!
Please enter your name here