ವಿಜಯಸಾಕ್ಷಿ ಸುದ್ದಿ, ಗದಗ: ಭಾರತದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸದಿರುವ ಘಟನೆಗೆ ಕಾರಣರಾದ ಸಂವಿಧಾನ ವಿರೋಧಿ ವಕೀಲರನ್ನು ಗಡಿಪಾರು ಮಾಡಲು ಆಗ್ರಹಿಸಿ ಗದಗ-ಬೆಟಗೇರಿ ಮುಸ್ಲಿಂ ಸಮಾಜದ ವೇದಿಕೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ವೇದಿಕೆಯ ಮುಖಂಡ ಮಹ್ಮದಯೂಸುಫ್ ನಮಾಜಿ ಮಾತನಾಡಿ, ಭಾರತದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಅವರ ಮೇಲೆ ಸಂವಿಧಾನ ವಿರೋಧಿ ವಕೀಲ ರಾಕೇಶ್ ಕಿಶೋರ್ ಶೂ ಎಸೆದಿರುವ ಘಟನೆ ಪ್ರಜಾಪ್ರಭುತ್ವದ ವಿರೋಧಿಯಾಗಿದೆ. ಈ ಘಟನೆಯನ್ನು ಗದಗ-ಬೆಟಗೇರಿ ಮುಸ್ಲಿಂ ಸಮಾಜದಿಂದ ಖಂಡಿಸುತ್ತೇವೆ. ಈ ಕೃತ್ಯವು ದೇಶದ ಪ್ರಜೆಗಳ ಗೌರವಕ್ಕೆ ತೀವ್ರ ಧಕ್ಕೆ ತಂದಿದೆ ಎಂದರು.
ಇಮ್ತಿಯಾಜ್ ಆರ್. ಮಾನ್ವಿ ಮಾತನಾಡಿ, ನಮ್ಮ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಕೆಲ ಕೋಮುವಾದಿಗಳು ನಡೆಸುತ್ತಿರುವ ಹೀನ ಕೃತ್ಯಗಳಿಂದ ನಮ್ಮ ದೇಶದ ಸಂವಿಧಾನಕ್ಕೆ ಅಪಮಾನವಾಗುತ್ತಿದೆ. ನ್ಯಾಯಮೂರ್ತಿಗಳು ತಮ್ಮ ಕರ್ತವ್ಯವನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸುತ್ತಿದ್ದಾರೆ. ಅವರ ಮೇಲಿನ ಇಂತಹ ಹೀನಾಯ ಕೃತ್ಯವು ಸಾರ್ವಜನಿಕ ವಿಶ್ವಾಸವನ್ನು ಕುಗ್ಗಿಸುತ್ತದೆ. ಈ ನ್ಯಾಯವಾದಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಾಬಾಜಾನ ಬಳಗಾನೂರ, ಅಷ್ಫಾಕ್‌ಅಲಿ ಹೊಸಳ್ಳಿ ಇಂಜಿನಿಯರ್, ಅನ್ವರ್ ಶಿರಹಟ್ಟಿ, ಉಮರ್‌ಫಾರುಖ್ ಹುಬ್ಬಳ್ಳಿ, ಮುಜಮ್ಮಿಲ್ ಬಳ್ಳಾರಿ, ರಫೀಕ್ ಜಮಾಲಖಾನವರ, ಮುನ್ನಾ ಶೇಖ್, ಮುಜಾಫರ್ ಮುಲ್ಲಾ, ಸಾಧಿಕ್ ನರೇಗಲ್ಲ, ಮೆಹಬೂಬ್ ಮುಲ್ಲಾ, ರಜಾಕ್ ಸೂಡಿ, ರಿಯಾಜ್ ಪಾಮಡಿ, ಮಹ್ಮದ್‌ಶಫಿ ಮುಲ್ಲಾ, ಮೆಹಬೂಬ್ಸಾಬ್ ಬಳ್ಳಾರಿ, ಖಾಜಾಸಾಬ್ ಇಸ್ಮಾಯಿಲನವರ, ಮೌಲಾಸಾಬ್ ಗಚ್ಚಿ, ಗೌಸ್ಸಾಬ್ ಅಕ್ಕಿ, ಸಲೀಂ ಹರಿಹರ, ಖಾಜೇಸಾಬ್ ಬಳ್ಳಾರಿ ಮುಂತಾದವರು ಇದ್ದರು.