ಬೆಂಗಳೂರು:- ಅಂಗಡಿ ಮಾಲೀಕರು ಈ ಸುದ್ದಿಯನ್ನು ಮಿಸ್ ಮಾಡ್ದೆ ನೋಡಿ. ಅಂಗಡಿಗೆ ಬರುವವರು ಗ್ರಾಹಕರೆಂದು ಮೈ ಮರೆಯಬೇಡಿ. ಕ್ಷಣಾರ್ಧದಲ್ಲಿ ನಿಮ್ಮ ಹಣ ಎಸ್ಕೇಪ್ ಆಗತ್ತೆ ಹುಷಾರ್.
Advertisement
ಎಸ್, ಮಾಲೀಕನ ಗಮನವನ್ನು ಬೇರೆ ಕಡೆ ಸೆಳೆದು ಇಬ್ಬರು ಕಳ್ಳರು ಕಳ್ಳತನ ಎಸಗಿರುವ ಘಟನೆ ನೆಲಮಂಗಲ ತಾಲೂಕಿನ ಡಾಬಸ್‌ಪೇಟೆಯಲ್ಲಿ ಜರುಗಿದೆ.
ಕುಮಾರ್.ವಿ ಎಂಬವರು ಶಿವಗಂಗೆ ವೃತ್ತದ ಬಳಿ ಎಸ್ ವಿ ಎಸ್ ಹೆಸರಿನ ಪ್ರಾವಿಜನ್ ಸ್ಟೋರ್ ಹಾಕಿದ್ದಾರೆ. ಜೂನ್ 6 ರಂದು ಹಾಡಹಗಲೇ ಇಬ್ಬರು ಕಳ್ಳರು ಕೈಚಳಕ ತೋರಿ 48 ಸಾವಿರ ರೂ. ಕದ್ದು ಪರಾರಿಯಾಗಿದ್ದಾರೆ. ಖತರ್ನಾಕ್ ಕಳ್ಳರ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.