ಬೆಂಗಳೂರು: ತಮ್ಮ ವಾಸದ ದೀಪಾಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್ ಪಡೆದ ಆರೋಪ ಸಂಬಂಧ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್ಡಿ ಕುಮಾರಸ್ವಾಮಿ, ಅಂತಹ ದೊಡ್ಡ ಅಪರಾಧ ನಡೆದಿಲ್ಲ, ನಾನೇನು ದೇಶ ಲೂಟಿ ಮಾಡಿಲ್ಲ. 2,000 ರೂಪಾಯಿಗೆ ಕರೆಂಟ್ ಕದೀಬೇಕಾ ನಾನು? ಎಂದರು.
Advertisement
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರಿಗೆ ಬೇರೆ ಯಾವುದೇ ಕೆಲಸ ಇಲ್ಲ. ಕಾಂಗ್ರೆಸ್ಗೆ ದೊಡ್ಡ ದೊಡ್ಡ ಹಗರಣ ಬಯಲಿಗೆ ತರುವ ಧೈರ್ಯವಿಲ್ಲ. ಕಾಂಗ್ರೆಸ್ನವರು ರಾಜ್ಯವನ್ನು ಬೆಳಗಿಸಿರುವುದನ್ನು ನೋಡಿದ್ದೇನೆ. ದರಿದ್ರ ಬಂದಿರುವುದು ಕಾಂಗ್ರೆಸ್ ನಾಯಕರಿಗೆ ಎಂದರು.