ಹೈಸ್ಕೂಲ್‌ ಗೆಳತಿಗೆ ಖಾಸಗಿ ವೀಡಿಯೋ ತೋರಿಸಿ ಬ್ಲ್ಯಾಕ್ ಮೇಲ್: ಆರೋಪಿ ಅಂದರ್!

0
Spread the love

ಬೆಂಗಳೂರು:- ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಹೈಸ್ಕೂಲ್‌ ಗೆಳತಿಗೆ ಖಾಸಗಿ ವೀಡಿಯೋ ತೋರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

Advertisement

ಬಂಧಿತ ಆರೋಪಿಯನ್ನು ಮೋಹನ್ ಕುಮಾರ್ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಚಾಮರಾಜಪೇಟೆಯ 19 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನ ಬಂಧಿಸಿದ್ದಾರೆ.

ಯುವತಿಗೆ 2019ರಿಂದಲೇ ಆರೋಪಿ ಪರಿಚಯವಾಗಿದ್ದ. ದೇವನಹಳ್ಳಿಯ ಖಾಸಗಿ ಬೋರ್ಡಿಂಗ್ ಸ್ಕೂಲ್ ನಲ್ಲಿ ಓದುತ್ತಿದ್ದಾಗ ಪರಸ್ಪರ ಪರಿಚಯವಾಗಿದ್ದರು. ಆಗ ಇಬ್ಬರಿಗೆ ಪರಿಚಯವಾಗಿ ಬಳಿಕ ಪ್ರೀತಿ ಶುರುವಾಗಿತ್ತು. ರಜೆಯಲ್ಲಿ ಮನೆಯವರಿಗೆ ತಿಳಿಯದಂತೆ ಗೋವಾ ಸೇರಿ ಹಲವು ಕಡೆಗೆ ಇಬ್ಬರೂ ಟ್ರಿಪ್ ಹೋಗ್ತಿದ್ರು. ಮೋಹನ್ ಕುಮಾರ್ ಹಾಗೂ ಆತನ ಗೆಳೆಯರೊಂದಿಗೆ ಯುವತಿ ಟ್ರಿಪ್ ಹೋಗ್ತಿದ್ದಳು.

ಆಗ ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಬಳಿಕ ಅದನ್ನ ವಿಡಿಯೋ ಚಿತ್ರೀಕರಣ ಸಹ ಮಾಡಿಕೊಂಡಿದ್ದಾನೆ. ಕೆಲ ದಿನಗಳ ನಂತರ ಖಾಸಗಿ ವಿಡಿಯೋ ಹಾಗೂ ಫೋಟೋ ತೋರಿಸಿ ಬ್ಲ್ಯಾಕ್‌ಮೇಲ್‌ ಮಾಡೋದಕ್ಕೆ ಶುರು ಮಾಡಿದ್ದಾನೆ.

ಖಾಸಗಿ ವೀಡಿಯೋ ತೋರಿಸಿ, ಹಣಕ್ಕೆ ಡಿಮ್ಯಾಂಡ್‌ ಮಾಡಿದ್ದಾನೆ. ಆರೋಪಿ ಮೋಹನ್‌ ಹೇಳಿದಂತೆ ಆತನ ಕುಟುಂಸ್ಥರು ಹಾಗೂ ಆತನ ಗೆಳಯರ ಖಾತೆಗೆ ಹಂತ ಹಂತವಾಗಿ 1.25 ಕೋಟಿ ರೂ. ಗಣ ವರ್ಗಾವಣೆ ಮಾಡಿದ್ದಾಳೆ, ಜೊತೆಗೆ ಬರೋಬ್ಬರಿ 1.32 ಕೋಟಿ ರೂ. ನಗದು ಹಣ ನೀಡಿದ್ದಾಳೆ.

ಇದಾದ ನಂತರವೂ ಆರೋಪಿ ಮೋಹನ್‌ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಕೊನೆಗೆ ರೋಸಿಹೋಗಿ ಮೋಹನ್ ಮತ್ತು ಆತನ ಕುಟುಂಸ್ಥರ ವಿರುದ್ಧ ಯುವತಿ ದೂರು ನೀಡಿದ್ದಾಳೆ. ದೂರಿನ ಆಧಾರದ ಮೇಲೆ ಆರೋಪಿಯನ್ನು ಅರೆಸ್ಟ್ ಮಾಡಲಾಗಿದ್ದು, ಆರೋಪಿಗೆ ಸಾಥ್ ಕೊಟ್ಟ ಇತರರ ವಿರುದ್ಧವೂ ದೂರು ದಾಖಲಾಗಿದೆ.


Spread the love

LEAVE A REPLY

Please enter your comment!
Please enter your name here