ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಕೋಚಲಾಪೂರ ಗ್ರಾಮದಲ್ಲಿ ಸೋಮವಾರ ರಾತ್ರಿ ಶ್ರಾವಣ ಭಜನೆಗೆ ಮಂಗಲ ಹಾಡಲಾಯಿತು. ಬನಶಂಕರಿ ಭಜನಾ ಮಂಡಳಿಯ ಆಶ್ರಯದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆದ ಭಜನಾ ಕಾರ್ಯಕ್ರಮವನ್ನು ಅನ್ನ ಸಂತಸರ್ಪಣೆಯೊಂದಿಗೆ ಮಂಗಲ ಮಾಡಲಾಯಿತು.
ಪ.ಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಮಾತನಾಡಿ, ಶ್ರಾವಣ ಮಾಸವನ್ನು ಹಿಂದೂ ಧರ್ಮದಲ್ಲಿ ಪುಣ್ಯದ ಮಾಸವೆಂದು ಕರೆಯಲಾಗುತ್ತಿದೆ. ಈ ಮಾಸದಲ್ಲಿ ಕೈಗೊಂಡ ಪೂಜೆ, ವೃತ ಮುಂತಾದವುಗಳೆಲ್ಲವೂ ನಿಶ್ಚಿತ ಫಲ ಕೊಡುತ್ತವೆ ಎಂಬ ನಂಬುಗೆಯಿದೆ. ಇಂದಿನ ದಿನಗಳಲ್ಲಿ ಭಜನಾ ತಂಡಗಳು ಕಡಿಮೆಯಾಗುತ್ತಿರುವುದು ವಿಷಾದನೀಯ ಸಂಗತಿ. ಆದ್ದರಿಂದ ನಮ್ಮ ಹಿರಿಯರು ಹಿಂದಿನಿಂದ ಹಾಕಿಕೊಂಡ ಪದ್ಧತಿಗಳನ್ನು ನಾವುಗಳು ಅನುಸರಿಸಿ, ಅವುಗಳನ್ನು ಮುಂದಿನ ಪೀಳಿಗೆಗೂ ವಿಸ್ತರಿಸಬೇಕಾದುದು ನಮ್ಮ ಕರ್ತವ್ಯವಾಗಿದೆ ಎಂದರು.
ರೋಟರಿ ಅಧ್ಯಕ್ಷ ಡಾ. ಆರ್.ಕೆ. ಗಚ್ಚಿನಮಠ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ, ಶ್ರಾವಣ ಮಾಸದ ಮಹತ್ವ ಮತ್ತು ಭಜನೆಯ ಮಹತ್ವ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಬನಶಂಕರಿ ಭಜನಾ ಮಂಡಳಿಯ ಸರ್ವ ಸದ್ಯರು, ಡಾ. ಎಲ್.ಎಸ್. ಗೌರಿ, ಮುಖ್ಯ ಶಿಕ್ಷಕ ಸಂಗಯ್ಯ ಪ್ರಭುಸ್ವಾಮಿಮಠ, ನಿವೃತ್ತ ಶಿಕ್ಷಕ ಆರ್.ಎಸ್. ಮಠ, ವೀರಭದ್ರಪ್ಪ ಕೆರಿಯವರ, ಶೇಖರಗೌಡ ಅಯ್ಯನಗೌಡ್ರ, ಜಗದೀಶ ಹಿರೇಮಠ, ಬಸಯ್ಯ ಮೇಟಿಮಠ, ಅಂದಾನಯ್ಯ ಮಾಲಗಿತ್ತಿಮಠ, ವಿರೂಪಾಕ್ಷಯ್ಯ ಮೇಟಿಮಠ, ಸಂಗಯ್ಯ ಮಾಲಗಿತ್ತಿಮಠ, ಮಲ್ಲರಡ್ಡೆಪ್ಪ ರಡ್ಡೇರ, ಶರಣಪ್ಪಗೌಡ ಅಯ್ಯನಗೌಡ್ರ, ಶಂಕರಗೌಡ ಅಯ್ಯನಗೌಡ್ರ ಮುಂತಾದವರಿದ್ದರು.



