ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ನವರಾತ್ರಿಯ ಕಾಲಘಟ್ಟದಲ್ಲಿ ಅಸುರೀ ಶಕ್ತಿಗಳ ವಿರುದ್ಧ ಧರ್ಮದ ದಂಡಯಾತ್ರೆ ಮತ್ತು ಕೆಟ್ಟದ್ದರ ಮೇಲೆ ಒಳಿತಿನ ವಿಜಯ ನಡೆಯುತ್ತದೆ. ದುರ್ಗುಣಗಳನ್ನು ದೂರ ಮಾಡಿ ಸಾತ್ವಿಕ ಗುಣ ಹೊಂದುವುದು ನವರಾತ್ರಿ ಆಚರಣೆಯ ಪರಮ ಗುರಿಯಾಗಿದೆ. ಶಿವರಾತ್ರಿ ಮತ್ತು ನವರಾತ್ರಿ ನಮ್ಮನ್ನು ದೈವತ್ವದತ್ತ ನಡೆಸುತ್ತವೆ ಎಂದು ತಹಸೀಲ್ದಾರ ವಾಸುದೇವ ಸ್ವಾಮಿ ಹೇಳಿದರು.
ಅವರು ಪಟ್ಟಣದ ದೇಸಾಯಿ ಬಣದಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಶ್ರೀ ದುರ್ಗಾದೇವಿ ಪುರಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನವರಾತ್ರಿಯ ಸಂದರ್ಭದಲ್ಲಿ ವಿಶೇಷವಾಗಿ ದೇವಿಶಕ್ತಿಯ ಆರಾಧನೆಗೆ ಮಹತ್ವ ನೀಡಲಾಗಿದೆ. ನವರಾತ್ರಿಯಲ್ಲಿ ವಿದ್ಯೆ, ಸಂಪತ್ತು, ಸಮೃದ್ಧಿಯ ಪ್ರತೀಕವಾಗಿರುವ ಜಗನ್ಮಾತೆಯನ್ನು ಸ್ಮರಿಸುವ ಕಾರ್ಯ ಮಾಡಲಾಗುತ್ತದೆ.
ಪ್ರತಿವರ್ಷ ನವರಾತ್ರಿ ಸಂದರ್ಭದಲ್ಲಿ ದುರ್ಗಾದೇವಿ ದೇವಸ್ಥಾನದಲ್ಲಿ ದೇವಿಪುರಾಣ ಪ್ರವಚನ ಏರ್ಪಡಿಸುವ ಸಂಪ್ರದಾಯ ನೆರವೇರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮಂಜುನಾಥ ಮಾಗಡಿ ಮಾತನಾಡಿ, ನಮ್ಮ ಧಾರ್ಮಿಕ ಪರಂಪರೆಗಳು ನಮ್ಮ ನಾಡಿನ ಹೆಮ್ಮೆಯಾಗಿವೆ. ಪ್ರತಿಯೊಂದು ಹಬ್ಬದ ಆಚರಣೆಯಲ್ಲಿ ವಿಶಿಷ್ಟವಾದ ಧಾರ್ಮಿಕ ಹಿನ್ನೆಲೆ ಇರುತ್ತದೆ.
ಧರ್ಮದಿಂದ ನಾವು ನಡೆದಾಗ ಧರ್ಮ ನಮ್ಮನ್ನು ನಡೆಸುತ್ತದೆ. ಈ ನಿಟ್ಟಿನಲ್ಲಿ ದೇವಸ್ಥಾನದಲ್ಲಿ ಪ್ರವಚನ ಕಾರ್ಯಕ್ರಮ ಹೆಚ್ಚು ಪರಿಣಾಮವನ್ನು ಬೀರುತ್ತಿದೆ ಎಂದರು.
ಈ ಸಚಿದರ್ಭದಲ್ಲಿ ಎಎಸ್‌ಐ ಮೀನಾಕ್ಷಿ ಮಟ್ಟಿ, ಪುರಸಭೆ ಸದಸ್ಯ ಎಸ್.ಕೆ. ಹವಾಲ್ದಾರ್, ದೇವಣ್ಣ ಬಳಿಗಾರ, ವೀರೇಂದ್ರಕುಮಾರ ಕಟಗಿ, ತಿಪ್ಪಣ್ಣ ರೊಟ್ಟಿಗವಾಡ, ಮಲ್ಲೇಶ ಚಿಕ್ಕೇರಿ, ಪ್ರಕಾಶ ಗುತ್ತಲ, ಮುತ್ತು ನೀರಲಗಿ, ಸುರೇಶ ನುಚ್ಚಂಬಲಿ, ಪವನ ಬಂಕಾಪೂರ, ಎಂ.ಎಸ್. ಹಿರೇಮಠ, ಚಂದ್ರು ಮಾಗಡಿ ಮುಂತಾದವರಿದ್ದರು.
ಹನಮಂತಸಾ ಚೌದರಿ, ಜಿ.ಎಂ. ಪ್ರಜಾರ, ಚಂದ್ರಗೌಡ ಅಡರಕಟ್ಟಿ ಪುರಾಣ ಪ್ರವಚನ ನೀಡಿದರು. ಚಂದ್ರು ಮಾಗಡಿ ನಿರೂಪಿಸಿದರು.