ವಿಜಯಸಾಕ್ಷಿ ಸುದ್ದಿ, ಗದಗ : ಹುಲಕೋಟಿಯ ಐ.ಸಿ.ಎ.ಆರ್-ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಆದಾಯ ದ್ವಿಗುಣಗೊಂಡ ರೈತರಿಗೆ ‘ಶ್ರೇಷ್ಠ ಕೃಷಿಕರು’ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಕೃಷಿ ತಂತ್ರಜ್ಞಾನ ಅನ್ವಯಿಸುವಿಕೆ ಹಾಗೂ ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಉಪ ಕೃಷಿ ನಿರ್ದೇಶಕರಾದ ಸ್ಪೂರ್ತಿ ಜಿ.ಎಸ್ ಮಾತನಾಡಿ, ಕೃಷಿ ಇಲಾಖೆಯಲ್ಲಿ ಈ ವರ್ಷ ಮುಂಗಾರು ಹಂಗಾಮಿನಲ್ಲಿ ದೊರೆಯುವ ಬೀಜ, ಗೊಬ್ಬರ, ಯಂತ್ರೋಪಕರಣಗಳು ಹಾಗೂ ಕೃಷಿ ಪರಿಕರಗಳ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೇಂದ್ರಮುಖ್ಯಸ್ಥೆ ಡಾ. ಸುಧಾ ಮಂಕಣಿ, ಎ.ಎಸ್.ಎಫ್ ಕಾರ್ಯದರ್ಶಿಗಳು ಹಾಗೂ ಕೆವಿಕೆ ಸಲಹೆಗಾರರಾದ ಡಾ. ಎಲ್.ಜಿ. ಹಿರೇಗೌಡರ, ನಿವೃತ್ತ ವಿಜ್ಞಾನಿ ಎಸ್.ಎಚ್. ಆದಾಪೂರ, ಎಸ್.ಕೆ. ಮುದ್ಲಾಪೂರ, ಪ್ರಶಸ್ತಿ ಸ್ವೀಕರಿಸಿದ ಮಂಗಲಾ ನೀಲಗುಂದ ಮಾತನಾಡಿದರು.
ಕಾರ್ಯಕ್ರಮದಲ್ಲಿ ಒಟ್ಟು 85 ಜನ ರೈತರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎನ್.ಎಚ್. ಭಂಡಿ ಸ್ವಾಗತಿಸಿ, ವಂದಿಸಿದರು. ಡಾ.ವಿನಾಯಕ ನಿರಂಜನ ಕಾರ್ಯಕ್ರಮ ನಿರೂಪಿಸಿದರು.