ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಶ್ರೀ ದುರ್ಗಾದೇವಿ ಜಾತ್ರೆಯು ಮೇ.9ರಂದು ಜರುಗಲಿದೆ. ಬೆಳಿಗ್ಗೆ ದುರ್ಗಾದೇವಿ ಪೂಜಾರಿಗಳಿಂದ ಅಗ್ನಿ ಕುಂಡದಲ್ಲಿ ಪ್ರವೇಶ ಕಾರ್ಯಕ್ರಮ ನಡೆಯಲಿದೆ.
Advertisement
ಅಗ್ನಿ ಕುಂಡದಲ್ಲಿ ಪ್ರವೇಶ ಹಾಗೂ ರಥೋತ್ಸವ ಕಾರ್ಯಕ್ರಮದ ಪ್ರಯುಕ್ತ ದೇವಿಗೆ ವಿಶೇಷ ಜಲಾಭಿಷೇಕ ಹಾಗೂ ಚಿನ್ನ-ಬೆಳ್ಳಿ ಆಭರಣಗಳಿಂದ ಅಲಂಕಾರ ಮಾಡಿ ಗಂಗಾ ಪೂಜೆ ಸಲ್ಲಿಸಿ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ಮಂಗಳ ವಾದ್ಯಗಳ ಮೂಲಕ ಮೆರವಣಿಗೆ ಸಂಚರಿಸಿ, ಅಗ್ನಿ ಕುಂಡದಲ್ಲಿ ಪ್ರವೇಶ ಮಾಡುವುದರ ಮೂಲಕ ಸಂಭ್ರಮದಿಂದ ಆಚರಿಸಲಾಗುತ್ತದೆ.
ಮಧ್ಯಾಹ್ನ ಸರ್ವ ಧರ್ಮ ಸಾಮೂಹಿಕ ವಿವಾಹ ನಡೆಯಲಿದ್ದು, ಸಾಯಂಕಾಲ ದೇವಿಯ ಮಹಾ ರಥೋತ್ಸವ ನೆರವೇರಲಿದೆ ಎಂದು ಟ್ರಸ್ಟ್ ಕಮಿಟಿಯ ಪ್ರಕಟಣೆ ತಿಳಿಸಿದೆ.