ವಿಜಯಸಾಕ್ಷಿ ಸುದ್ದಿ, ಡಂಬಳ: ಸಮಾಜದಲ್ಲಿ ವ್ಯಕ್ತಿ ಹೇಗೆ ಬದುಕಬೇಕೆಂಬುದನ್ನು ತಮ್ಮ ರಾಮಾಯಣ ಮಹಾಕಾವ್ಯದಲ್ಲಿ ಮಹರ್ಷಿ ವಾಲ್ಮೀಕಿ ಅವರು ಅದ್ಭುತವಾಗಿ ಚಿತ್ರಿಸಿದ್ದಾರೆ ಎಂದು ಉಪತಹಸೀಲ್ದಾರ ಎಸ್.ಎಸ್. ಬಿಚ್ಚಾಳಿ ಹೇಳಿದರು.
ಡಂಬಳ ಗ್ರಾಮದ ಉಪತಹಸೀಲ್ದಾರ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸಮಾಜದಲ್ಲಿ ಸಹೋದರತ್ವ, ಸಮಾನತೆ ಇರಬೇಕೆಂಬ ಉದ್ದೇಶದಿಂದ ರಾಮಾಯಣ ಕಾವ್ಯದಲ್ಲಿ ರಾಮರಾಜ್ಯದ ಪರಿಕಲ್ಪನೆಯನ್ನು ಬರೆದಿದ್ದಾರೆ. ಅದರಂತೆ ನಾವೆಲ್ಲರೂ ಒಂದೇ ಎಂಬ ಸಂಕಲ್ಪ, ಸಹೋದರತೆ, ಜೀವನ ನಡೆಸಿದಾಗ ಮಾತ್ರ ಇಂತಹ ಜಯಂತಿಗಳಿಗೆ ಅರ್ಥ ಬರುತ್ತದೆ. ಮಹರ್ಷಿ ವಾಲ್ಮೀಕಿ ಅವರ ಬದುಕಿನ ಸರ್ವಶ್ರೇಷ್ಠವಾದ ಮೌಲ್ಯಗಳನ್ನು ಪ್ರತಿಬಿಂಬಿಸುವ ರಾಮಾಯಣದಂತಹ ಮಹಾಕಾವ್ಯವನ್ನು ರಚಿಸುವ ಮೂಲಕ ಜಗದ ಜನರು ಉತ್ತಮ ಜೀವನ ನಡೆಸಲು ಮುನ್ನುಡಿ ಬರೆದಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಪ್ರಭು ಬಾಗಲಿ, ಗ್ರಾಮ ಆಡಳಿತ ಅಧಿಕಾರಿ ಯೋಗೇಶ ಕುರಿಹಟ್ಟಿ, ಸಿಬ್ಬಂದಿ ಎಂ. ಎಂ. ವಿಭೂತಿ, ಹನಮಂತ ಗುಜ್ಜಲರ, ವಸಂತ ಕುಲಕರ್ಣಿ, ತಿಮ್ಮಣ್ಣ ವಡ್ಡರ, ನಾಗಪ್ಪ ಕೊರವರ, ದೇವಪ್ಪ ಪೂಜಾರ, ರಫಿ ಬೂದಿಹಾಳ, ಮಲ್ಲಪ್ಪ ಮಾದರ, ರಫಿ ಸೊರಟೂರ ಇದ್ದರು.