ವಿಜಯಸಾಕ್ಷಿ ಸುದ್ದಿ, ಗದಗ : ಶ್ರೀ ಪಂಚಾಕ್ಷರಿ ಹಾಗೂ ಡಾ. ಪಂಡಿತ ಪುಟ್ಟರಾಜ ಗವಾಯಿಗಳರವರ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಪಂಡಿತ ಪುಟ್ಟರಾಜ ಸಮಾಜಸೇವಾ ಟ್ರಸ್ಟ್ ವತಿಯಿಂದ 15 ಸಾವಿರ ಮಿರ್ಚಿ ಪ್ರಸಾದ ಸೇವೆ ಕೈಗೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಟ್ರಸ್ಟ್ನ ಅಧ್ಯಕ್ಷ ಶಿದ್ರಾಮಯ್ಯ ಕಟಗಿಹಳ್ಳಿಮಠ ಮಾತನಾಡಿ, ವೀರೇಶ್ವರ ಪುಣ್ಯಾಶ್ರಮ ಲಕ್ಷಾಂತರ ಸಂಗೀತ ಕಲಾವಿದರನ್ನು ನೀಡಿದೆ, ನೀಡುತ್ತಿದೆ. ಗದಗ ನಗರದ ಮಿರ್ಚಿ ಎಂದರೆ ರಾಜ್ಯಾದ್ಯಂತ ಪ್ರಸಿದ್ಧವಾಗಿದ್ದು, ಈ ಕಾರಣದಿಂದ ನಮ್ಮ ಸಂಘದ ವತಿಯಿಂದ ಜಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಮಿರ್ಚಿಯ ಪ್ರಸಾದ ನೀಡುತ್ತಿರುವುದು ನಮ್ಮ ಅಳಿಲು ಸೇವೆಯಾಗಿದೆ ಎಂದು ಹೇಳಿದರು.
ಟ್ರಸ್ಟ್ ವತಿಯಿಂದ 15 ಸಾವಿರ ಮಿರ್ಚಿಗಳನ್ನು ಭಕ್ತರಿಗೆ ಪ್ರಸಾದದೊಂದಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಸನಗೌಡ ಪಾಟೀಲ, ಗಂಗಾಧರ ಬೆನಕಲ್, ಮಹಾಂತೇಶ ಲಗಳಿ, ಈಶಪ್ಪ ಅಂಗಡಿ, ಬಸವರಾಜ ಡಾವಣಗೇರಿ, ಶರಣಪ್ಪ ಮೇಟಿ, ಭೀಮಪ್ಪ ಮೋಖಾಶಿ, ಬಡಾವಣೆಯ ಹಿರಿಯರಾದ ಪಟ್ಟದಕಲ್ಲ ಗುರುಗಳು, ಗ್ಯಾನಪ್ಪ ಗೌಡರ, ಸುನೀಲ ಚಿನ್ನಾಪೂರ, ಶಿವಪ್ಪ ಲಗಳಿ, ಈರಣ್ಣ ಕಾತರಕಿ ಸೇರಿದಂತೆ ಟ್ರಸ್ಟ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.