ವಿಜಯಸಾಕ್ಷಿ ಸುದ್ದಿ, ಗದಗ : ಮಾನವನ ಜೀವನದ ಉನ್ನತಿಗೆ ಸತ್ಸಂಗ ಬೇಕೇ ಬೇಕು. ಅಜ್ಞಾನಿಗಳ ಜೊತೆ ಸಂಗ ಮಾಡಿದಾಗ ವ್ಯರ್ಥವಾದ ಜೀವನವಾಗುತ್ತದೆ. ಜ್ಞಾನಿಗಳ ಜೊತೆ ಸಂಗ ಮಾಡಿದಾಗ ಜ್ಞಾನದ ಅರಿವನ್ನು ಪಡೆಯಬಹುದು. ಶರಣರ ಸಂಗದಿಂದ ತನುವಿನ ದೋಷ, ಮನಸ್ಸಿನ ದೋಷಗಳನ್ನು ಕಳೆದುಕೊಳ್ಳಬಹುದು ಎಂದು ಪರಮಪೂಜ್ಯ ಶ್ರೀ ಶಿವಶಾಂತವೀರ ಶರಣರು ನುಡಿದರು.
ಇಲ್ಲಿನ ಅಕ್ಕನ ಬಳಗ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದ ಪೂಜ್ಯರು, ಅಕ್ಕಮಹಾದೇವಿಯ ವಚನಗಳಲ್ಲಿ ಗಟ್ಟಿತನವನ್ನು ಕಾಣುತ್ತೇವೆ. ಗಟ್ಟಿಯಾದ ನಿರ್ಧಾರವನ್ನು ವಚನಗಳಲ್ಲಿ ತರುವಲ್ಲಿ ಅಕ್ಕನೇ ಮೊದಲಿಗಳು ಎನ್ನಬಹುದು. ಮನುಷ್ಯನ ಜನ್ಮದ ಸಾರ್ಥಕತೆ ಗುರುವಿನಿಂದ ಮಾತ್ರ ಸಿಗಲು ಸಾಧ್ಯ. ನಮ್ಮ ಅವಗುಣಗಳನ್ನು ಕಳೆದು, ಜೀವನದಲ್ಲಿ ಬೆಳಕು ನೀಡುವ ಶಕ್ತಿ ಗುರುವಿಗಿದೆ ಎಂದರು.
ಸರೋಜಿನಿ ಹಕ್ಕಾಪಕ್ಕಿ ಹಾಗೂ ಕಲಾವತಿ ಎಸ್.ಪಟ್ಟಣಶೆಟ್ಟಿರವರು ಅಕ್ಕನ ಬಳಗಕ್ಕೆ ಭಾವಚಿತ್ರವನ್ನು ಹಸ್ತಾಂತರಿಸಿದರು. ಪ್ರಸಾದದ ಭಕ್ತಿ ಸೇವೆಯನ್ನು ವಹಿಸಿಕೊಡು, ತಮ್ಮ ಅಮೂಲ್ಯವಾದ ಸೇವೆಯನ್ನು ಅಕ್ಕಮಹಾದೇವಿಗೆ ಸಮರ್ಪಿಸಿದರು. ವೇದಿಕೆಯ ಮೇಲೆ ಜಯಲಕ್ಷ್ಮಿ ಬಳ್ಳಾರಿ ಉಪಸ್ಥಿತರಿದ್ದರು. ಅಕ್ಕನ ಬಳಗದ ಅಧ್ಯಕ್ಷೆ ಲಲಿತಾ ವಿ.ಬಾಳಿಹಳ್ಳಿಮಠ ಸ್ವಾಗತಿಸಿದರು. ನಾಗರತ್ನ ಹುಬಳಿಮಠ ಪ್ರಾರ್ಥಿಸಿದರು.
ಜಯಶ್ರೀ ಪಾಟೀಲ ನಿರೂಪಿಸಿದರು. ಕಾರ್ಯದರ್ಶಿ ರೇಣುಕಾ ಅಮಾತ್ಯ ವಂದಿಸಿದರು.
ಶಿವಲೀಲಾ ಕುರುಡಗಿ, ಗಿರಿಜಾ ನಾಲ್ವತವಾಡಮಠ, ಶೈಲಾ ಕವಲೂರ, ಸುಜಾತಾ ಹಿರೇಮಠ, ದ್ರಾಕ್ಷಾಯಣಿ ಸಂಕೇಶ್ವರ, ಮುದಗಣ್ಣವರ, ಶಿವಲೀಲಾ ಹಿರೇಮಠ, ಲತಾ ಮುತ್ತಿನಪೆಂಡಿಮಠ, ಕಸ್ತೂರಿ ಹಿರೇಗೌಡರ, ಸುವರ್ಣ ವಸ್ತçದ, ಸುವರ್ಣ ಮದರಿಮಠ, ಸುವರ್ಣ ಹೊಸಂಗಡಿ, ಶಶಿಕಲಾ ಹಿರೇಮಠ, ಹಕ್ಕಪಕ್ಕಿ ಕುಟುಂಬ ವರ್ಗದವರು ಹಾಗೂ ಪಟ್ಟಣಶೆಟ್ಟಿ ಕುಟುಂಬ ವರ್ಗದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಉಷಾ ಧಡೂತಿ, ರಾಜೇಶ್ವರಿ ಶೆಟ್ಟರ್, ಕುಸುಮಾ ಹಡಗಲಿ, ಪ್ರೇಮಾ ಮೇಟಿ, ಶಿವಲೀಲಾ ಅಕ್ಕಿ, ಜಯಲಕ್ಷ್ಮಿ ಗುಗ್ಗರಿ ಮುಂತಾದವರು ಪಾಲ್ಗೊಂಡಿದ್ದರು.
ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಸಂಪಾದನೆಯ ಒಂದು ಭಾಗವನ್ನು ಒಳ್ಳೆಯ ಕಾರ್ಯಗಳಿಗೆ ದಾನ ಮಾಡಬೇಕು. ಅದರಿಂದ ಇಮ್ಮಡಿಯಾದ ಫಲವು ಸಿಗುತ್ತದೆ. ಅಕ್ಕನ ಬಳಗದ ಬಗ್ಗೆ ಅಭಿಮಾನದಿಂದ 80 ವರ್ಷದಿಂದ ಮಾತೆಯರೇ ಸುವ್ಯವಸ್ಥಿತವಾಗಿ ನಡೆಸಿಕೊಂಡು ಬಂದಿರುವ ಅಕ್ಕನ ಬಳಗ ತುಂಬಾ ವಿಶೇಷವಾದದ್ದು ಎಂದು ಶ್ರೀ ಶಿವಶಾಂತವೀರ ಶರಣರು ನುಡಿದರು.