ಶುಭಾಂಶು ಶುಕ್ಲಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ಯಾನ ಮತ್ತೆ ಮುಂದೂಡಿಕೆ..!

0
Spread the love

ನವದೆಹಲಿ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ಯುವ ಮುಂಬರುವ ಮಿಷನ್ ಜೂನ್ 22 ಅಥವಾ 23ಕ್ಕೆ ಮುಂದೂಡಲಾಗಿದೆ. ಜೂನ್ 11 ಮತ್ತು 19ಕ್ಕೆ ಈ ಮಿಷನ್ ಉಡಾವಣೆಯಾಗಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ ಅದು ಮುಂದೂಡಲ್ಪಟ್ಟಿತ್ತು.

Advertisement

ಈಗ ತಾಂತ್ರಿಕ ಸಮಸ್ಯೆಗಳಿಂದಾಗಿ ಹಲವು ಬಾರಿ ಮುಂದೂಡಲಾಗುತ್ತಿದೆ. ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಸ್ಪೇಸ್​ಎಕ್ಸ್​, Ax-4 ಸಿಬ್ಬಂದಿ ವೈದ್ಯಕೀಯ ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಕಾಪಾಡಿಕೊಳ್ಳಲು ಫ್ಲೋರಿಡಾದಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. ಉತ್ತಮ ಆರೋಗ್ಯ ಮತ್ತು ಉತ್ಸಾಹದಿಂದಿದ್ದು, ಉಡಾವಣೆಯನ್ನು ಎದುರು ನೋಡುತ್ತಿದ್ದಾರೆ ಎಂದು ತಿಳಿಸಿದೆ.

ಜೂನ್ 22ರ ಭಾನುವಾರ ನಸುಕಿನ ಜಾವ 3.42ಕ್ಕೆ (ಅಮೆರಿಕ ಕಾಲಮಾನ ಪ್ರಕಾರ) ಆಕ್ಸಿಯಮ್​ ಮಿಷನ್​ 4 ಉಡಾವಣೆಗೆ ಸಿದ್ಧತೆ ನಡೆಯುತ್ತಿದೆ. ಒಂದು ವೇಳೆ ಇದು ತಪ್ಪಿದರೆ​ ಸೋಮವಾರ ನಸುಕಿನ ಜಾವ 3.20ಕ್ಕೆ (ಅಮೆರಿಕ ಕಾಲಮಾನ ಪ್ರಕಾರ) ಉಡ್ಡಯನ ಕಾರ್ಯಾಚರಣೆ ನಡೆಯಲಿದೆ.

ಉದ್ದೇಶಿತ ಉಡಾವಣಾ ದಿನಾಂಕದಲ್ಲಿನ ಬದಲಾವಣೆಯು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಜ್ವೆಜ್ಡಾ ಸೇವಾ ಮಾಡ್ಯೂಲ್‌ನ ಹಿಂಭಾಗದ ಹೆಚ್ಚಿನ ವಿಭಾಗದಲ್ಲಿ ಇತ್ತೀಚಿನ ದುರಸ್ತಿ ಕಾರ್ಯಗಳ ನಂತರ ಬಾಹ್ಯಾಕಾಶ ನಿಲ್ದಾಣದ ಕಾರ್ಯಾಚರಣೆಗಳನ್ನು ಮೌಲ್ಯಮಾಪನ ಮಾಡುವುದನ್ನು ಮುಂದುವರಿಸಲು ನಾಸಾಗೆ ಸಮಯ ಒದಗಿಸುತ್ತದೆ.


Spread the love

LEAVE A REPLY

Please enter your comment!
Please enter your name here