ಮೈಸೂರು: ಶೂದ್ರರಿಗೆ ಮಾನ ಮರ್ಯಾದೆ ಇದ್ದರೆ ದೇವಸ್ಥಾನಕ್ಕೆ ಹೋಗಬಾರದು ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಬುದ್ಧರನ್ನು ಹೊಗಳುವ ಭರದಲ್ಲಿ ಹಿಂದೂ ಧರ್ಮದ ಬಗ್ಗೆ ಹೀನವಾಗಿ ಮಾತನಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ನಗರದಲ್ಲಿ ಮಹಿಷ ದಸರಾದಲ್ಲಿ ಮಾತನಾಡಿದ ಅವರು,
ಗಂಡಸರನ್ನು ಮಾತ್ರ ಬ್ರಾಹ್ಮಣರು ಅಂತಾರೆ. ಹೆಂಗಸರನ್ನು ಬ್ರಾಹ್ಮಣರು ಎನ್ನಲ್ಲಾ, ಅವರನ್ನು ಶೂದ್ರರು ಅಂತಾರೆ. ದೇವಸ್ಥಾನ ಕಟ್ಟುವುದು ಶೂದ್ರರು. ದೇವಸ್ಥಾನದ ಒಳಗೆ ಇರುವವರ ಬ್ರಾಹ್ಮಣರು. ದೇವಸ್ಥಾನ ಕಟ್ಟಿದ ಶೂದ್ರರನ್ನೇ ಬಿಟ್ಟುಕೊಳ್ಳಲ್ಲ. ನಾವು ಶೂದ್ರರಲ್ಲಾ ಎಂದು ಹೇಳಬೇಕು ಎಂದಿದ್ದಾರೆ.
ತಟ್ಟೆಗೆ ದುಡ್ಡು ಹಾಕ್ತೀರಾ, ಅರ್ಧ ಕಾಯಿ ಇಟ್ಟುಕೊಂಡು ಅರ್ಧ ಕೊಡುತ್ತಾರೆ ಅಷ್ಟೇ. ದೇವಸ್ಥಾನಕ್ಕೆ ಹೋದರೆ ಕಳೆದುಕೊಳ್ಳುತ್ತೇವೆ. ಶೂದ್ರರಿಗೆ ಮಾನ ಮರ್ಯಾದೆ ಇದ್ದರೆ ದೇವಸ್ಥಾನಕ್ಕೆ ಹೋಗಬಾರದು. ಮನುಸ್ಮೃತಿಯಲ್ಲಿ ಶೂದ್ರ ಅಂದರೆ ಸೂಳೆಗೆ ಹುಟ್ಟಿದವನು ಅಂತಾ ಇದೆ. ನಾವು ಶೂದ್ರರು ಎಂದು ಒಪ್ಪಿಕೊಳ್ಳಬೇಕಾ ಎಂದು ಪ್ರಶ್ನಿಸಿದ್ದಾರೆ.