ಗುಂಡಿ ಮುಚ್ಚೋಕು ಈ ಸರ್ಕಾರಕ್ಕೆ ಯೋಗ್ಯತೆ ಇಲ್ವಾ.?: ಆರ್ ಅಶೋಕ್ ಕಿಡಿ

0
Spread the love

ಬೆಂಗಳೂರು: ಗುಂಡಿ ಮುಚ್ಚೋಕು ಈ ಸರ್ಕಾರಕ್ಕೆ ಯೋಗ್ಯತೆ ಇಲ್ವಾ ಎಂದು ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ರಸ್ತೆ ಮೇಲೆ ಗುಂಡಿ ಬಿದ್ದಿವೆ. ಗುಂಡಿಗಳು ಇರುವುದರಿಂದ ಬಸ್ ಓಡಾಟ ಸರಿಯಾಗಿ ಆಗುತ್ತಿಲ್ಲ. ಗುಂಡಿ ಮುಚ್ಚೋಕು ಈ ಸರ್ಕಾರಕ್ಕೆ ಯೋಗ್ಯತೆ ಇಲ್ವಾ ಎಂದು ಕಿಡಿಕಾರಿದ್ದಾರೆ.

Advertisement

ಲೋಕಾಯುಕ್ತರು ರಸ್ತೆ ಕಸ ನೋಡಿ ಛೀಮಾರಿ ಹಾಕಿದ್ದಾರೆ. ಗುಂಡಿ, ಕಸ ಏನು ಈ ಸರ್ಕಾರಕ್ಕೆ ಕಾಣುತ್ತಿಲ್ಲ. ಎಲ್ಲಾ ಕಡೆ ಪ್ರವಾಹ ಜಾಸ್ತಿ ಆಗಿದೆ. ಅದಕ್ಕೂ ಹಣ ಬಿಡುಗಡೆ ಮಾಡಿಲ್ಲ. ಸಿಎಂ ಎಲ್ಲೂ ಹಣ ಬಿಡುಗಡೆ ಬಗ್ಗೆ ಮಾತಾಡಿಲ್ಲ. ಯಾದಗಿರಿ, ಕಲಬುರಗಿ, ಹಲವು ಭಾಗದಲ್ಲಿ ಅನಾಹುತ ಆಗುತ್ತಿದೆ. ಸರ್ಕಾರ ಏನು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.


Spread the love

LEAVE A REPLY

Please enter your comment!
Please enter your name here