ಮಹಾರಾಷ್ಟ್ರ:- ಸರ್ಕಾರಿ ಹಾಸ್ಟೆಲ್ನ 50 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಹಾರಾಷ್ಟ್ರದ ಲಾತೂರ್ನಲ್ಲಿ ಜರುಗಿದೆ.
ಪುರನ್ಮಲ್ ಲಾಹೋಟಿ ಸರ್ಕಾರಿ ಪಾಲಿಟೆಕ್ನಿಕ್‌ನ ಹಾಸ್ಟೆಲ್‌ನಲ್ಲಿ ರಾತ್ರಿ 7 ಗಂಟೆ ಸುಮಾರಿಗೆ ಅನ್ನ, ಚಪಾತಿ, ಬೆಂಡೆಕಾಯಿ ಕರಿ ಮತ್ತು ಸೊಪ್ಪಿನ ಸಾರು ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ ವಿದ್ಯಾರ್ಥಿನಿಯರಿಗೆ ವಾಂತಿ ಶುರುವಾಗಿತ್ತು, ಮಾಹಿತಿ ಪಡೆದ ಕಾಲೇಜು ಪ್ರಾಂಶುಪಾಲರು ಸ್ಥಳಕ್ಕೆ ಧಾವಿಸಿ ಲಾತೂರ್ನವಿಲಾಸ್ರಾವ್ ದೇಶಮುಖ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ.ಉದಯ್ ಮೋಹಿತೆ ಅವರಿಗೆ ಮಾಹಿತಿ ನೀಡಿದರು.
ಅಸ್ವಸ್ಥ ವಿದ್ಯಾರ್ಥಿಗಳನ್ನು ತಕ್ಷಣವೇ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಮಧ್ಯರಾತ್ರಿಯ ವೇಳೆಗೆ ಸುಮಾರು 50 ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಾ ಮೋಹಿತೆ ತಿಳಿಸಿದ್ದಾರೆ. ಭಾನುವಾರ ಮುಂಜಾನೆ 3 ಗಂಟೆ ವೇಳೆಗೆ ಅವರಲ್ಲಿ 20 ಮಂದಿ ಡಿಸ್ಚಾರ್ಜ್ ಆಗಿದ್ದು, ಉಳಿದ 30 ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಯಾರ ಸ್ಥಿತಿಯೂ ಚಿಂತಾಜನಕವಾಗಿಲ್ಲ ಎಂದರು.