ಸಿದ್ದರಾಮಯ್ಯರೇ ನೀವು ಮನುಷ್ಯರೋ!? ರಾಕ್ಷಸರೋ!?: ಸಿಎಂಗೆ ಸಿ.ಟಿ.ರವಿ ಟಾಂಗ್!

0
Spread the love

ಚಿಕ್ಕಮಗಳೂರು:-ಕಾಂಗ್ರೆಸ್‌ ಪಕ್ಷ ದಲಿತರನ್ನು ನಿಜಕ್ಕೂ ಸಿಎಂ ಮಾಡುತ್ತಾ ಎಂದು ಕಾಂಗ್ರೆಸ್ ಮುಖಂಡ CT ರವಿ ಪ್ರಶ್ನೆ ಮಾಡಿದ್ದಾರೆ.

Advertisement

ಈ ಸಂಬಂಧ ಮಾತನಾಡಿದ ಅವರು, ಭ್ರಷ್ಟಾಚಾರ ಭ್ರಷ್ಟಾಚಾರವೇ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದರು. ಹಿಂದೆ ರಾಕ್ಷಸರು ನಾವು ಯಾರಿಗೂ ಹೆದರುವುದಿಲ್ಲ ಎಂದು ಹೇಳುತ್ತಿದ್ದರಂತೆ. ಸಿಎಂ ಸಿದ್ದರಾಮಯ್ಯನವರು ನಾನು ಯಾರಿಗೂ ಹೆದರಲ್ಲ, ಬಿಜೆಪಿ-ಜೆಡಿಎಸ್‌ಗೆ ಹೆದರಲ್ಲ, ರಾಜೀನಾಮೆ ಕೊಡಲ್ಲ ಎಂದು ಹೇಳುತ್ತಿದ್ದಾರೆ‌. ಹಾಗಾದರೆ, ನಾವು ನಿಮ್ಮನ್ನ ಏನೆಂದು ಕರೆಯಬೇಕೆಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಸಿಎಂಗೆ ಸಂವಿಧಾನ-ಕಾನೂನಿನ ಬಗ್ಗೆ ಭಯವಿಲ್ಲ.‌ ನೈತಿಕತೆ ಪ್ರಜ್ಞೆಯೂ ಇಲ್ಲ. ಪ್ರಜಾಪ್ರಭುತ್ವದಲ್ಲಿ ಯಾರಿಗೆ ಹೆದರದಿದ್ದರೂ ಜನರಿಗೆ ಹೆದರಬೇಕು. ಅವರು ಜನರಿಗಿಂತಾ ದೊಡ್ಡವರಾ? ಜನ, ಸಂವಿಧಾನ, ಕಾನೂನು, ನ್ಯಾಯಾಲಯಕ್ಕೆ ಹೆದರಲ್ಲ ಅಂದ್ರೆ, ನಾವು ಮನುಷ್ಯರು ಅನ್ಕೊಳ್ಳಾದಾ? ರಾಕ್ಷಸರು ನಾವು ಯಾರಿಗೂ ಹೆದರಲ್ಲ ಅಂತಿದ್ರಂತೆ, ಹಾಗೇ ಅನ್ಕೋಬೇಕಾ ಎಂದು ವ್ಯಂಗ್ಯವಾಡಿದರು.

ರಾಯಚೂರಿನ ಸಮಾವೇಶದ ಕುರಿತು ಮಾತನಾಡಿ, ಅಧಿಕಾರ-ಹಣ ಉಪಯೋಗಿಸಿಕೊಂಡು ಯಾವ ಸಮಾವೇಶ ಬೇಕಾದರೂ ಮಾಡಬಹುದು. ಆದರೆ, ಸಮಾವೇಶಗಳ ಮೂಲಕ ಭ್ರಷ್ಟಾಚಾರ ಮುಚ್ಚಿ ಹಾಕಲು ಆಗಲ್ಲ. ಭ್ರಷ್ಟಾಚಾರ ಭ್ರಷ್ಟಾಚಾರವೇ, ಉಪ್ಪು ತಿಂದೋನು‌ ನೀರು ಕುಡಿಯಬೇಕು, ಅದು ಪ್ರಕೃತಿ ಧರ್ಮ ಎಂದರು.


Spread the love

LEAVE A REPLY

Please enter your comment!
Please enter your name here