ಶಿವಮೊಗ್ಗ: ಸಿದ್ದರಾಮಯ್ಯ, ಡಿಕೆಶಿ ಸೇರಿ ಗೂಂಡಾಗಳ ರಕ್ಷಣೆಗೆ ಹೊರಟ್ಟಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪೊಲೀಸರ ರಕ್ಷಣೆಯನ್ನು ಸರ್ಕಾರ ಮಾಡಲ್ಲ ಎಂದರೆ ಸರ್ಕಾರ ಬದುಕಿದೆಯಾ? ಸತ್ತಿದೆಯಾ?
ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದೆ. ಸಿದ್ದರಾಮಯ್ಯ, ಡಿಕೆಶಿ ಸೇರಿ ಗೂಂಡಾಗಳ ರಕ್ಷಣೆಗೆ ಹೊರಟ್ಟಿದ್ದಾರೆ. ಇದು ಗೂಂಡಾ ಸರ್ಕಾರನಾ? ಈ ನಡೆ ಸರಿಯಲ್ಲ, ಹೀಗಾಗಿಯೇ ಇಡೀ ದೇಶದಲ್ಲಿ ಕಾಂಗ್ರೆಸ್ ನಿರ್ನಾಮ ಆಗ್ತಿದೆ ಎಂದಿದ್ದಾರೆ.
ಇನ್ನೂ ಮುಡಾ ಹಗರಣ ಡೈವರ್ಟ್ ಮಾಡಲು ಜಾತಿ ಜನಗಣತಿ ವರದಿ ಪ್ರಸ್ತಾಪ ಮಾಡಿದ್ದರೆ ಅದನ್ನು ಜನ ಸಹಿಸೋದಿಲ್ಲ. ವರದಿ ಇನ್ನೂ ಬಹಿರಂಗ ಆಗಿಲ್ಲ ಈಗಲೇ ಕೆಲವರು ವಿರೋಧ ಮಾಡ್ತಿದ್ದಾರೆ. ಮೊದಲು ವರದಿ ಬಿಡುಗಡೆ ಆಗಲಿ. ಅದರಲ್ಲಿ ಇರುವ ಸರಿ ತಪ್ಪು ಬಗ್ಗೆ ಚರ್ಚೆ ಆಗಲಿ ಎಂದಿದ್ದಾರೆ.



