ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ರಾಜಕೀಯ ಉದ್ದೇಶದಿಂದ, ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವದನ್ನು ಖಂಡಿಸಿ ರವಿವಾರ ಪಟ್ಟಣದ ಶಿಗ್ಲಿ ಕ್ರಾಸ್‌ನಲ್ಲಿ ಲಕ್ಷ್ಮೇಶ್ವರ ತಾಲೂಕಾ ಕುರುಬರ ಸಂಘ, ತಾಲೂಕ ಅಹಿಂದ ಸಂಘಟನೆ, ಸಿದ್ದರಾಮಯ್ಯ ಅಭಿಮಾನಿ ಬಳಗ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರಮುಖ ರಸ್ತೆಯಲ್ಲಿ ರಸ್ತೆ ತಡೆ ನಡೆಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕರಾದದ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ ಮತ್ತು ರಾಮಕೃಷ್ಣ ದೊಡ್ಡಮನಿ, ಕೇಂದ್ರ ಹಾಗೂ ರಾಜ್ಯ ಬಿಜಿಪಿ, ಜೆಡಿಎಸ್‌ನವರು ರಾಜ್ಯಪಾಲರ ಮುಖಾಂತರ ಸಿಎಂ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ. ರಾಜಕೀಯ ದುರುದ್ದೇಶದಿಂದ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕೂಷನ್‌ಗೆ ಅನುಮತಿ ನೀಡಿದ್ದಾರೆ. ಕಾಂಗ್ರೆಸ್ ಸರಕಾರದ ದಕ್ಷ ಆಡಳಿತ ಸಹಿಸಲಾಗದೇ ಬಿಜೆಪಿ ಹಾಗೂ ಜೆಡಿಎಸ್ ರಾಜ್ಯಪಾಲರನ್ನು ದುರುಪಯೋಗ ಮಾಡಿಕೊಂಡು, ಸರಕಾರವನ್ನು ಅಸ್ಥಿರಗೊಳಿಸಲು ಹೊರಟಿದೆ. ಸಿದ್ದರಾಮಯ್ಯ ಅವರ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಭ್ರಷ್ಟಾಚಾರದ ಯಾವುದೇ ಕಪ್ಪುಚುಕ್ಕಿಯನ್ನು ತಾಕಿಸಿಕೊಂಡಿಲ್ಲ. ಆದರೆ ಹಗರಣವೇ ಅಲ್ಲದ ಮುಡಾ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಜೆಡಿಎಸ್‌ನವರು ಬೀದಿನಾಟಕ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಟಿ. ಈಶ್ವರ ಹಾಗೂ ಅಹಿಂದ ಸಂಘಟನೆಯ ಗದಗ ಜಿಲ್ಲಾ ಗೌರವಾಧ್ಯಕ್ಷ ಸೋಮಣ್ಣ ಬೆಟಗೇರಿ ಮಾತನಾಡಿ, ಬಡವರ, ದೀನದಲಿತರ, ಅಹಿಂದ ವರ್ಗದವರಿಗೆ ಅನುಕೂಲವಾಗುವಚಿತೆ ಅನೇಕ ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿರುವ ಮುಖ್ಯಮಂತ್ರಿಯರನ್ನು ರಾಜೀನಾಮೆ ಕೇಳುತ್ತಿರುವುದು ಜನವಿರೋಧಿ ನೀತಿಯಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ನಿರ್ದೇಶನದಂತೆ ರಾಜ್ಯಪಾಲರು ವರ್ತಿಸುತ್ತಿದ್ದಾರೆ. ಸಿದ್ದರಾಮಯ್ಯ ಬಗ್ಗೆ ಮಾತನಾಡುವ ನೈತಿಕತೆ ಇಲ್ಲದ ಬಿಜೆಪಿ, ಜೆಡಿಎಸ್ ಪಕ್ಷದವರು ಕಾಂಗ್ರೆಸ್ ಸರ್ಕಾರದ ಉತ್ತಮ ಆಡಳಿತಕ್ಕೆ ಕಳಂಕ ತರಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಅಮರೇಶ ತೆಂಬದಮನಿ, ತಾಲೂಕಾ ಕುರುಬರ ಸಂಘದ ಅಧ್ಯಕ್ಷ ಶೇಕಣ್ಣ ಕಾಳೆ, ಚನ್ನಪ್ಪ ಜಗಲಿ, ಗುರುನಾಥ ದಾನಪ್ಪನವರ, ಫಕ್ಕೀರೇಶ ಮ್ಯಾಟಣ್ಣವರ, ರಾಮಣ್ಣ ಅಡಗಿಮನಿ, ಪದ್ಮರಾಜ ಪಾಟೀಲ್, ತಿಪ್ಪಣ್ಣ ಸಂಶಿ, ವಿ.ಜಿ. ಪಡಗೇರಿ, ಸುರೇಶ ಭೀರಣ್ಣವರ, ಭಾಗ್ಯಶ್ರೀ ಬಾಬಣ್ಣ, ಗೀತಾ ಭೀರಣ್ಣನವರ, ಬಸವರೆಡ್ಡಿ ಹನಮರೆಡ್ಡಿ, ನೀಲಪ್ಪ ಶೇರಸೂರಿ, ಯಲ್ಲಪ್ಪ ಸೂರಣಗಿ, ಫಿರ್ದೋಷ ಆಡೂರ, ರಮೇಶ ಗಡದವರ, ನೀಲಪ್ಪ ಪಡಗೇರಿ, ಇಸ್ಮಾಯಿಲ್ ಆಡೂರ, ಸತೀಶ ಪಾಟೀಲ್, ರಾಜಣ್ಣ ಹೊಳಲಾಪುರ, ಶರಣು ಗೋಡಿ, ಹರೀಶ ಲಕ್ಷ್ಮೇಶ್ವರ, ರಾಮಣ್ಣ ಲಮಾಣಿ (ಶಿಗ್ಲಿ),ಯಲ್ಲಪ್ಪ ತಳವಾರ, ರಾಜು ಓಲೆಕಾರ, ಅಣ್ಣಪ್ಪ ರಾಮಗೇರಿ, ಮಹೇಶ ಲಮಾಣಿ, ಲಕ್ಷö್ಮಣ ಲಮಾಣಿ, ಯಲ್ಲಪ್ಪ ಹಂಜಗಿ, ಎಂ.ಎಂ. ಗಾಡಗೊಳಿ, ನೂರಅಹ್ಮದ ನಿಡಗುಂದಿ ಮುಂತಾದವರು ಉಪಸ್ಥಿತರಿದ್ದು, ತಹಸೀಲ್ದಾರರ ಮುಖಾಂತರ ರಾಷ್ಟçಪತಿಗಳಿಗೆ ಮನವಿ ಅರ್ಪಿಸಿದರು.
ಇದೆ ವೇಳೆ ಕೇಂದ್ರ ಹಾಗೂ ರಾಜ್ಯ ಬಿಜೆಪಿ, ಜೆಡಿಎಸ್ ವಿರುದ್ಧ ಹಾಗೂ ಗೋ ಬ್ಯಾಕ್ ಗವರ್ನರ್ ಎಂಬ ಘೋಷಣೆ ಕೂಗುವ ಮೂಲಕ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಾವಿರಾರು ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.