ಪಂಚಮಸಾಲಿ ಹೋರಾಟಗಾರರ ವಿರುದ್ಧ ಸಿದ್ಧರಾಮಯ್ಯ ಸರ್ಕಾರದಿಂದ ಲಾಠಿ ಪ್ರಹಾರ: ಗದಗ-ಶಿರಹಟ್ಟಿ ರಸ್ತೆ ತಡೆದು ಪ್ರತಿಭಟನೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಪಂಚಮಸಾಲಿ ಸಮಾಜದ ಬಸವ ಜಯಮೃತ್ಯುಂಜಯ ಸ್ವಾಮಿಗಳು ೨ಎ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿಯ ಸುವರ್ಣ ಸೌಧದ ಎದುರಿಗೆ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಪಂಚಮಸಾಲಿಗರ ವಿರುದ್ಧ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಪೊಲೀಸರಿಂದ ಲಾಠಿ ಪ್ರಹಾರ ಮಾಡಿಸಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರರ ಸಂವಿಧಾನದ ಭಾರತ ದೇಶದಲ್ಲಿ ನ್ಯಾಯ ಮತ್ತು ಪ್ರತಿಭಟನೆಯ ಹಕ್ಕು ಎಲ್ಲರಿಗೂ ಇದೆ. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹೋರಾಟಗಾರರ ಮನವಿಯನ್ನು ಸಹ ಪಡೆಯದೇ ಪಂಚಮಸಾಲಿ ಸಮುದಾಯದ ಸ್ವಾಮೀಜಿಗಳನ್ನು, ಹೋರಾಟಗಾರರನ್ನು ಬಂಧಿಸಿ ಅವರ ಮೇಲೆ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಗುರುವಾರ ಸೊರಟೂರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಪಂಚಮಸಾಲಿ ಸಮಾಜದ ಹಿರಿಯ ಮುಖಂಡರಾದ ಭದ್ರೇಶ ಕುಸ್ಲಾಪೂರ ನೇತೃತ್ವದಲ್ಲಿ ಗದಗ -ಶಿರಹಟ್ಟಿ ಮುಖ್ಯ ರಸ್ತೆಯನ್ನು ಒಂದು ಗಂಟೆ ಕಾಲ ತಡೆದು, ಟೈರ್‌ಗೆ ಬೆಂಕಿ ಹಚ್ಚಿ ಗ್ರಾಮದ ಪಂಚಮಸಾಲಿ ಸಮಾಜದ ಮುಖಂಡರು, ಗುರು-ಹಿರಿಯರು, ಯುವಕರು ಸಿದ್ಧರಾಮಯ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ, ಬಂಧಿಸಿರುವ ಎಲ್ಲರನ್ನೂ ಕೂಡಲೇ ಬಿಡುಗಡೆ ಮಾಡಬೇಕು. ಎಲ್ಲರ ಮೇಲೆ ಹಾಕಿರುವ ಕೇಸ್‌ಗಳನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದರು.

ಮಲಕಾಜಪ್ಪ ಗಿಡ್ಡಕೆಂಚಣ್ಣವರ, ಪ್ರಕಾಶ ಕಲ್ಲಗುಡಿ, ಬಸವರಾಜ ಕನ್ಯಾಳ, ಪರಶುರಾಮ ಅಂಬಲಿ, ಮಲ್ಲಪ್ಪ ಫ.ಕಲಗುಡಿ, ಅಡಿವೆಪ್ಪ ಕನ್ನೂರ, ಬಸಪ್ಪ ಅಣ್ಣಿಗೇರಿ, ಈರಣ್ಣ ಬೋಳನವರ, ಮಲಕಾಜಪ್ಪ, ಶರಣಪ್ಪ ಹಳ್ಳಿ, ನಾಗರಾಜ ಜಾಮದಾರ, ಕಲ್ಲಪ್ಪ ಪಾಟೀಲ, ಯಲ್ಲಪ್ಪ ಹೂಗಾರ, ಪ್ರವೀಣ ಕನ್ನೂರ, ಚಂದು ಜಾಮದಾರ, ಈಶ್ವರಪ್ಪ ಕುಸ್ಲಾಪುರ, ಬಸಪ್ಪ ಛಬ್ಬಿ, ಈರಣ್ಣ ಕೊಟಗಿ ಸೇರಿದಂತೆ ಗ್ರಾಮದ ಮುಖಂಡರು, ಯುವಕರು, ಪ್ರತಿಭಟನೆಯಲ್ಲಿ ಭಾಗವಹಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.


Spread the love

LEAVE A REPLY

Please enter your comment!
Please enter your name here