ನವದೆಹಲಿ: ಮೋದಿ ಅವರಿಗೆ ಚಾಲೆಂಜ್ ಮಾಡುವ ನೈತಿಕತೆ ಸಿದ್ದರಾಮಯ್ಯ ಅವರಿಗೆ ಇಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಬಕಾರಿ ಗುತ್ತಿಗೆದಾರರು ಮೊದಲ ಬಾರಿಗೆ ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ಹೀಗೆ ಹೇಳುತ್ತಿದ್ದಾರೆ. ಗುತ್ತಿಗೆದಾರರು 700 ಕೋಟಿಯಷ್ಟು ಸರ್ಕಾರ ವಸೂಲಿ ಮಾಡಿದೆ ಎಂದು ಹೇಳಿದ್ದಾರೆ. ಬೇರೆ ಬೇರೆ ಚುನಾವಣೆಗೆ ದುಡ್ಡು ಕೊಟ್ಟಿದಾಯ್ತು,
ಮೋದಿ ಅವರಿಗೆ ಚಾಲೆಂಜ್ ಮಾಡುವ ನೈತಿಕತೆ ಸಿದ್ದರಾಮಯ್ಯ ಅವರಿಗೆ ಇಲ್ಲ. 25 ವರ್ಷದಲ್ಲಿ ಮೋದಿ ಅವರಿಗೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಸಿದ್ದರಾಮಯ್ಯ ಅವರ ಮೇಲೆ ದಿನಾ ಒಂದು ಕಪ್ಪು ಚುಕ್ಕೆ ಕೂರುತ್ತಿದೆ. ಸಚಿವರು ಪಿಎ ಹೆಸರು ಬರೆದು ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಏನು ಅನಿಸುವುದಿಲ್ಲವೇ? ಅವರ ಕೈಯಲ್ಲಿ ಅಧಿಕಾರ ಇದೆ ಕೊರೋನ ಸೇರಿ ಯಾವ ವಿಚಾರ ಬಗ್ಗೆಯೂ ತನಿಖೆ ನಡೆಯಲಿ ಉಪ್ಪು ತಿಂದವರು ನೀರು ಕುಡಿಯಲಿ ಎಂದು ಹರಿಹಾಯ್ದರು.