ಸಿದ್ದರಾಮಯ್ಯ ಬೇರೆ ಜಿಲ್ಲೆಗೆ ಗಮನ ಹರಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಮಂಡ್ಯ ಜಿಲ್ಲೆಯ ಪ್ರತೀ ಕಾರ್ಯಕ್ರಮಕ್ಕೂ ಬರುತ್ತಾರೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ
ಅವರು, ಸಿದ್ದರಾಮಯ್ಯ ಬೇರೆ ಜಿಲ್ಲೆಗೆ ಗಮನ ಹರಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಮಂಡ್ಯ ಜಿಲ್ಲೆಯ ಪ್ರತೀ ಕಾರ್ಯಕ್ರಮಕ್ಕೂ ಬರುತ್ತಾರೆ. ಮೊನ್ನೆ ನನ್ನನ್ನು ಅಮೆರಿಕಕ್ಕೆ ಕಳಿಸಿದ್ದರು. ಇಳುವರಿ ಬಗ್ಗೆ ಅಧ್ಯಯನ ಮಾಡೋದಕ್ಕೆ ನಾವು ಹೋಗಿದ್ದೆವು. ನೀವೆಲ್ಲಾ ನೀರು ಜಾಸ್ತಿ ಕೊಟ್ಟರೆ ಜಾಸ್ತಿ ಇಳುವರಿ ಬರುತ್ತೆ ಅಂತ ತಿಳಿದುಕೊಂಡಿದ್ದೀರಿ. ಆದರೆ ಆ ಥರ ಇಲ್ಲ. ಮಣ್ಣಿನ ಪರೀಕ್ಷೆ ಮಾಡಬೇಕು ಎಂದು ಚೆಲುವರಾಯಸ್ವಾಮಿ ಹೇಳಿದ್ದಾರೆ.
ಜನರಿಗೆ 5 ಗ್ಯಾರಂಟಿ ಕೊಟ್ಟು ಅಭಿವೃದ್ಧಿ ಹೇಗೆ ಮಾಡ್ತಾರೆ ಅಂತ ನಮ್ಮನ್ನು ಟೀಕಿಸಿದರು. ಅಭಿವೃದ್ಧಿಗೆ ಹಣ ಇಲ್ಲ ಅಂತಾ ಜನ ಮಾತಾಡಿಕೊಳ್ತಿದ್ದಾರೆ, ಇದಕ್ಕೆಲ್ಲಾ ದುಡ್ಡು ಎಲ್ಲಿಂದ ಬರುತ್ತದೆ ಎಂದು ಕೇಳುತ್ತಾರೆ. ಅದೇನೋ ಸಿಎಂ ಸಿದ್ದರಾಮಯ್ಯನವರು ಪವಾಡ ಪುರುಷ. ಸಿಎಂ ಇವೆಲ್ಲ ಅದೆಲ್ಲಿಂದ ಮಾಡ್ತಾರೋ ಅವರಿಗೇ ಗೊತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಈವರೆಗೂ ಯಾವುದೇ ಕಾಮಗಾರಿಗೆ ಹಣ ಇಲ್ಲ ಅಂದಿಲ್ಲ ಎಂದು ಬಣ್ಣಿಸಿದ್ದಾರೆ.



