ಸಿದ್ದರಾಮಯ್ಯ ಅವರೇ ಸರ್ಕಾರವನ್ನು ವಿಸರ್ಜಿಸಿ, ಆದ್ರೆ ಡಿಕೆಶಿ ಕೈಗೆ ಕರ್ನಾಟಕ ಕೊಡಬೇಡಿ- ಯತ್ನಾಳ್!

0
Spread the love

ವಿಜಯಪುರ:- ಸಿದ್ದರಾಮಯ್ಯ ಅವರೇ ಬೇಕಾದ್ರೆ ಸರ್ಕಾರವನ್ನು ವಿಸರ್ಜಿಸಿ ಆದ್ರೆ ಡಿಕೆಶಿ ಕೈಗೆ ಕರ್ನಾಟಕವನ್ನು ಮಾತ್ರ ಕೊಡಬೇಡಿ. ಒಂದು ವೇಳೆ ಕೊಟ್ರೆ ಮಾರಿಕೊಂಡು ಹೋಗ್ತಾರೆ ಎಂದು ಹೇಳುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರ ಹಾಕಿದ್ದಾರೆ.

Advertisement

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ನಿಮಗೆ ನಿಭಾಯಿಸಲು ಸಾಧ್ಯವಾಗದಿದ್ದರೆ, ವಿಧಾನಸಭೆ ವಿಸರ್ಜನೆ ಮಾಡಿ. ತಪ್ಪಿಯೂ ಕರ್ನಾಟಕವನ್ನ ಡಿಕೆಶಿ ಕೈಗೆ ಕೊಡಬೇಡಿ. ಮಾರಿಕೊಂಡು ಹೋಗ್ತಾರೆ ಎಂದರು. ಕಾಂಗ್ರೆಸ್‌ನಲ್ಲಿ ಎಲ್ಲ ಶಾಸಕರು ರೊಚ್ಚಿಗೆದ್ದಿದ್ದಾರೆ. ಸದ್ಯ ರಾಜ್ಯದ ಮಂತ್ರಿಗಳು ಲೂಟಿಗೆ ಇಳಿದಿದ್ದಾರೆ. ಸಿಎಂ ಡೀಲಿಂಗ್‌ನ್ನು ಅವರ ಮಗ ಮಾಡ್ತಿದ್ದಾನೆ, ಬೈರತಿ ಸುರೇಶ್ ಅವರು ಡೀಲಿಂಗ್ ಮಾಡುತ್ತಾರೆ. ಡಿಕೆಶಿ ಇಬ್ಬರು ಅಣ್ಣ, ತಮ್ಮ ಸೇರಿಕೊಂಡು ಲೂಟಿ ಮಾಡುತ್ತಿದ್ದಾರೆ. ಸರ್ಕಾರ ಯಾವಾಗ ಹೋಗುತ್ತೆ ಗೊತ್ತಿಲ್ಲ, ಅಷ್ಟರಲ್ಲಿ ನಾವು ಹಣ ಮಾಡಿಕೊಂಡು ಪಾರಾಗಬೇಕು ಎಂದು ಎಲ್ಲ ಮಂತ್ರಿಗಳಿಗೂ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇನ್ನು ಗ್ಯಾರಂಟಿಗಳ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ಬಾದಾಮಿಯಲ್ಲಿ, ನಾವು ಬಾದಾಮಿಯ ಸಂಪೂರ್ಣ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಯಾಕೆಂದರೆ ನಮ್ಮ ಹತ್ತಿರ ದುಡ್ಡಿಲ್ಲ, ಅದಕ್ಕೆ ನರೇಂದ್ರ ಮೋದಿ ಅವರು ಕೊಡಬೇಕು ಎಂದಿದ್ದಾರೆ. ಕಾಂಗ್ರೆಸ್‌ನವರು ಗ್ಯಾರಂಟಿ ಹೆಸರಲ್ಲಿ ಪುಕ್ಕಟೆ ಹಂಚುತ್ತಾ ಹೋಗುತ್ತಾರೆ. ಗ್ಯಾರಂಟಿ ಒಂದು ನೆಪ ಅಷ್ಟೇ, ಇವರು ಲೂಟಿ ಮಾಡುತ್ತಿದ್ದಾರೆ. ಬಡವರಿಗೆ ಅಷ್ಟು ಕೊಟ್ಟಿದ್ದೇವೆ, ಇಷ್ಟು ಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ಗ್ಯಾರಂಟಿ ಬಿಟ್ಟು ಅಭಿವೃದ್ಧಿ ಮಾಡಬಹುದು. ಕರ್ನಾಟಕದಲ್ಲಿ ಸಾಕಷ್ಟು ಸಂಪನ್ಮೂಲ ಇದೆ. ಬಡವರಿಗೆ ಕೊಡುವುದನ್ನು ಕೊಟ್ಟು, ಬಳಿಕ ಬೇರೆ ಅಭಿವೃದ್ಧಿ ಕೆಲಸ ಮಾಡಬಹುದು ಎಂದರು.


Spread the love

LEAVE A REPLY

Please enter your comment!
Please enter your name here