ಬೆಂಗಳೂರು: ರಾಜ್ಯದಲ್ಲಿ ಸಿದ್ದರಾಮಯ್ಯ ಅಸಹಾಯಕ ಮುಖ್ಯಮಂತ್ರಿ ಆಗಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕರ್ನಾಟಕ ಬಿಹಾರದ ರೀತಿಯ ದರೋಡೆ ರಾಜ್ಯವಾಗಿದೆ. ಮಂಗಳೂರಿನಲ್ಲಿ ದರೋಡೆ ನಡೆದಿದೆ.
5 ನಿಮಿಷದಲ್ಲಿ 15ಕೋಟಿ ಲೂಟಿ ಆಗಿದೆ, ಇದು ಹಾಲಿವುಡ್, ಬಾಲಿವುಡ್ ಅಲ್ಲ, ಸ್ಯಾಂಡಲ್ ವುಡ್ ಸಿನಿಮಾ. ಐದು ನಿಮಿಷದಲ್ಲಿ ಲೂಟಿ ಹೊಡೆದು ದರೋಡೆ ಮಾಡಿ ಪರಾರಿಯಾಗಿದ್ದಾರೆ. ಸಿಎಂ ಹೋಗ್ತಾರೆ ಅಂತ ಗೊತ್ತಿದ್ದು ಲೂಟಿ ಹೊಡೆದಿದ್ದಾರೆ. ಕರ್ನಾಟಕದ ಪೊಲೀಸರ ಮೇಲೆ ಎಷ್ಟು ಭಯ ಇದೆ ಎಂದರು.
ಪಟಾ ಪಟ್ ಅಂತ ನಿಮ್ಮ ಅಕೌಂಟಿಗೆ ಹಣ ಹೋಗುತ್ತೆ ಅಂತ ಹೇಳಿದ್ರು. ಅದೇ ರೀತಿ ಪಟಾ ಪಟ್ ಅಂತ ಲೂಟಿ ಹೊಡೆದಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿಗಳಿಗೆ ಅಧಿಕಾರಿಗಳ ಮೇಲೆ ಹಿಡಿತ ಇದೆ ಅಂತ ಕೈಗನ್ನಡಿ ಇದೆ. ನನಗೆ ಸಿದ್ದರಾಮಯ್ಯ ಅವರ ಮೇಲೆ ಕರುಣೆ ಇದೆ. ಪೊಲೀಸರನ್ನ ಕರೆಸಿ ನೀವೆಲ್ಲಾ ಇದ್ದು ಹೀಗಾಗಿದೆಯಲ್ಲಪ್ಪಾ ಅಂತ ಕೇಳಿದ್ದಾರೆ. ಸಿದ್ದರಾಮಯ್ಯ ಅಸಹಾಯಕ ಮುಖ್ಯಮಂತ್ರಿ ಆಗಿದ್ದಾರೆ ಎಂದು ಕುಟುಕಿದರು.