ಹುಬ್ಬಳ್ಳಿ: ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ನಿಸ್ಸಿಮರು ಎಂದು ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಎಲ್ಲರ ಮೀಸಲಾತಿ ತೆಗೆದು ಮುಸ್ಲಿಮರಿಗೆ ಕೊಡಲು ಹೊರಟಿದ್ದಾರೆ. ಹಸಿ ಗೋಡೆ ಮೇಲೆ ಹಳ್ಳು ಒಗೆಯುವ ಕೆಲಸವನ್ನು ಸಿಎಂ ಮಾಡಿದ್ದಾರೆ. ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ನಿಸ್ಸಿಮರು.
Advertisement
ಮೀಸಲಾತಿ ಕೊಡುವುದು ಹೇಗೆ ಸಂವಿಧಾನ ವಿರೋಧಿಯಾಗುತ್ತೆ? ಈ ಬಗ್ಗೆ ಸಿಎಂ ಶ್ವೇತ ಪತ್ರ ಹೊರಡಿಸಲಿ ಎಂದಿದ್ದಾರೆ. ಇನ್ನೂ ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರಿಗೆ ಇವರು ಮುತ್ತು ಕೊಡುತ್ತಾರೆ, ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಕೋರರಿಗೆ ಮುತ್ತು ಕೊಡುತ್ತಾರೆ, ಕುಕ್ಕರ್ ಬಾಂಬ್ ಇಟ್ಟವರಿಗೂ ಮುತ್ತು ಕೊಡುತ್ತಾರೆ. ಆದರೆ ಶಾಂತ ರೀತಿಯಿಂದ ಹೋರಾಟ ಮಾಡಿದ ನಮ್ಮ ಮೇಲೆ ಲಾಠಿ ಚಾರ್ಜ್ ಮಾಡುತ್ತಾರೆ ಎಂದು ವಾಗ್ದಾಳಿ ಮಾಡಿದ್ದಾರೆ.