ಬೆಂಗಳೂರು: ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು ಈ ಗಣತಿ ಮಾಡಿಸುತ್ತಿದ್ದಾರೆ ಅನ್ನಿಸುತ್ತೆ ಎಂದು ಮಾಜಿ ಸಚಿವ ಸಿಸಿ ಪಾಟೀಲ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು ಈ ಗಣತಿ ಮಾಡಿಸುತ್ತಿದ್ದಾರೆ ಅನ್ನಿಸುತ್ತೆ. ಸರ್ಕಾರ ಮತ್ತು ಸಿದ್ದರಾಮಯ್ಯ ವಿರುದ್ಧ ವಿರೋಧಿ ಅಲೆ ಪಕ್ಷದಲ್ಲಿ ಮತ್ತು ಪಕ್ಷದ ಹೊರಗೆ ಇದೆ. ಅದನ್ನ ಮರೆ ಮಾಚೋದಕ್ಕೆ ಈ ಗಣತಿ ಮಾಡಿಸುತ್ತಿದ್ದಾರೆ ಎನಿಸುತ್ತಿದೆ ಎಂದರು.
ಇನ್ನೂ ಸಿದ್ದರಾಮಯ್ಯ ಇಂತಹ ವಿಷಯಗಳಲ್ಲಿ ಕ್ಲೆವರ್ ಇದ್ದಾರೆ. ಜಾತಿಗಣತಿ ಅನ್ನೋ ಕಾರ್ಡ್ ಅನ್ನ ಸಿದ್ದರಾಮಯ್ಯ ಪ್ಲೇ ಮಾಡುತ್ತಿದ್ದಾರೆ ಅನ್ನಿಸುತ್ತೆ. ಸಿಎಂ-ಡಿಸಿಎಂ ನಡುವೆ ಕುರ್ಚಿ ಕಿತ್ತಾಟ ಇದೆ. ಅದನ್ನ ಮರೆಮಾಚೋಕೆ ಇದನ್ನ ಮಾಡುತ್ತಿರಬಹುದು ಎಂದು ತಿಳಿಸಿದರು.
ಇವರು ಒಂದೇ ದಿನದಲ್ಲಿ ಬೇಕಾದರೆ ಸರ್ವೆ ಮುಗಿಸುತ್ತಾರೆ. ಅವರಿಗೆ ಬೇಕಾದ ಹಾಗೇ ಸಮೀಕ್ಷೆ ಮುಗಿಸುತ್ತಾರೆ. ಅವರ ಮನೆಯಲ್ಲಿ ಕೂತೇ ಬರೆಯುತ್ತಾರೆ. ರಾತ್ರಿ ಮನೆ ಮುಂದೆ ಬಂದು ಸ್ಟಿಕರ್ ಅಂಟಿಸಿದ್ರೆ ಮುಗೀತು. ಮಿಕ್ಕಿದ್ದು ಅವರೇ ಬರೆದುಕೊಳ್ಳುತ್ತಾರೆ. ಈ ಗಣತಿ ಬಿಜೆಪಿ ಒಪ್ಪಲ್ಲ.ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್ ಅವರೇ ಈ ಸಮೀಕ್ಷೆ ಒಪ್ಪಲು ರೆಡಿ ಇಲ್ಲ. ಗಣತಿ ಬಗ್ಗೆ ಮುಂದೆ ಹೋರಾಟ ಮಾಡೋಣ ಎಂದರು.